ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ಮೂವರು ಕಲಾವಿದರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ

ಧಾರವಾಡ: ಬಾಗಲಕೋಟೆಯಲ್ಲಿರುವ ಕರ್ನಾಟಕ ಬಯಲಾಟ ಅಕಾಡೆಮಿಯು 2021 ಹಾಗೂ 2022 ನೇ ಸಾಲಿನ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಧಾರವಾಡ ಜಿಲ್ಲೆಯ ಮೂವರು ಕಲಾವಿದರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದೊಡ್ಡಾಟ ಕಲಾವಿದ ಚಂದ್ರಶೇಖರಯ್ಯ ಗುರಯ್ಯನವರಿಗೆ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಇದು 25 ಸಾವಿರ ರೂಪಾಯಿ ನಗದು ಒಳಗೊಂಡಿದೆ. ಸಣ್ಣಾಟ ಕಲಾವಿದ ಸುರೇಂದ್ರ ಹುಲ್ಲಂಬಿ ಹಾಗೂ ದೊಡ್ಡಾಟ ಕಲಾವಿದ ಫಕ್ಕೀರಪ್ಪ ನೆರ್ತಿ ಅವರು 2022ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು 50 ಸಾವಿರ ರೂಪಾಯಿ ನಗದು ಒಳಗೊಂಡಿದೆ.

Edited By : Nagaraj Tulugeri
Kshetra Samachara

Kshetra Samachara

16/09/2022 07:58 pm

Cinque Terre

14.98 K

Cinque Terre

0

ಸಂಬಂಧಿತ ಸುದ್ದಿ