ನವಲಗುಂದ : 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಆಗಸ್ಟ್ 13 ಮುಂಜಾನೆಯಿಂದ "ಹರ್ ಘರ್ ತಿರಂಗಾ" ಅಭಿಯಾನ ಕಾರ್ಯಕ್ರಮ ಪ್ರಯುಕ್ತ ದೇಶದಾದ್ಯಂತ ತ್ರಿವರ್ಣ ಧ್ವಜವನ್ನು ಮನೆಗಳು ಸೇರಿದಂತೆ ಹಲವೆಡೆ ಹಾರಿಸಲಾಗುತ್ತಿದ್ದು, ಬೃಹತ್ ರ‍್ಯಾಲಿ ಸಹ ಹಮ್ಮಿಕೊಳ್ಳಲಾಗಿತ್ತು.
ಹೌದು... ಕೇಂದ್ರ ಹಾಗು ರಾಜ್ಯ ಸರಕಾರದ ನಿರ್ದೇಶನದಂತೆ "ಹರ ನರ ತಿರಂಗಾ' ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕಾಲೇಜು, ಸರಕಾರಿ ಕಟ್ಟಡ, ಅಂಗನವಾಡಿ, ಪಂಚಾಯತ ಕಟ್ಟಡಗಳಲ್ಲಿ ಧ್ವಜಾರೋಹಣ ಮಾಡಲು ಅಭಿಯಾನ ರೂಪಿಸಲು ಸೂಚಿಸಲಾಗಿದೆ.
ಈ ಹಿನ್ನೆಲೆ ನವಲಗುಂದ ತಾಲ್ಲೂಕಿನಾದ್ಯಂತ ಅಭಿಯಾನವನ್ನು ಯಶಸ್ವಿಗೊಳಿಸಲಾಗುತ್ತಿದೆ. ಪಟ್ಟಣದಲ್ಲಿ ಶಂಕರ ಕಾಲೇಜು ಸೇರಿದಂತೆ ಹಲವು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರ‍್ಯಾಲಿ ನಡೆಸಿದರು. ಹಾಗೂ ಬೆಳವಟಗಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಧ್ವಜಾರೋಹಣ ನೆರವೇರಿಸಿ, ಮಕ್ಕಳೊಂದಿಗೆ ಗ್ರಾಮದಲ್ಲಿ ರ‍್ಯಾಲಿ ಮಾಡುವ ಮೂಲಕ ಅದ್ದೂರಿಯಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Kshetra Samachara
13/08/2022 02:38 pm