ಕುಂದಗೋಳ: ಆ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೊಂದು ವೇದಿಕೆ ಸಿದ್ಧಗೊಂಡಿತ್ತು. ಅಲ್ಲಿ ಹಾಡು, ಸಂಗೀತ, ನೃತ್ಯ, ನಾಟಕ, ಏಕಪಾತ್ರಾಭಿನಯದ ಜೊತೆ ದೈಹಿಕ ಆಟೋಟ ಸ್ಪರ್ಧೆಯೂ ಇತ್ತು.
ಹೌದು... ಪದವಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಅವರಿಗೊಂದು ವೇದಿಕೆ ಕಲ್ಪಿಸಿ ಕೊಡಲು ಕುಂದಗೋಳ ಪಟ್ಟಣದ ಸರ್ಕಾರಿ ಪದವಿ ಪ್ರಥಮ ದರ್ಜೆ ಕಾಲೇಜು ಮುಂದಾಗಿದ್ದು, 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ವೇದಿಕೆ ಸಜ್ಜು ಗೊಳಿಸಿದೆ.
ಈಗಾಗಲೇ ಪ್ರಾಧ್ಯಾಪಕರ ನೇತೃತ್ವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ, ಸಂಗೀತ, ಏಕಪಾತ್ರಾಭಿನಯ ಎಲ್ಲದರಲ್ಲೂ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ತೋರಿದರು. ಅಷ್ಟೇ ಉತ್ಸಾಹದಿಂದ ಆಟೋಟ ಸ್ಪರ್ಧೆಯಲ್ಲಿಯೂ ಭಾಗವಹಿಸಿದರು.
Kshetra Samachara
22/07/2022 02:18 pm