ಮಕ್ಕಳ ಕಲಿಕಾ ಪ್ರಕ್ರಿಯೆ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ನಲಿ ಕಲಿ ಯೋಜನೆಗೆ ಅಲ್ಲಾಪೂರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜ್ಞಾನ ಭಂಡಾರದಿಂದ ಕಂಗೋಳಿಸುತ್ತಿದೆ.
ಹೌದು ! ಶಾಲಾ ಕೊಠಡಿ ಒಳಗೆ ಹೋದ್ರೇ ಮಕ್ಕಳ ಅಭ್ಯಾಸಕ್ಕೆ ಅಕ್ಷರ ಮಾಲೆಗಳೆ ಸ್ವಾಗತ ಕೋರುತ್ತವೆ, ನಲಿ ಕಲಿ ಕೊಠಡಿಯಲ್ಲಿ ಗಣಿತ, ಸಮಾಜ ವಿಜ್ಞಾನ, ಇತಿಹಾಸ, ವ್ಯಾಕರಣದ ಸ್ವರೂಪವನ್ನು ಪ್ರಯೋಗದ ಮೂಲಕ ಕಲಿಯಲು ಮಕ್ಕಳಿಂದಲೇ ಕಲಿಕಾ ಪ್ರಯೋಗವನ್ನು ಶಿಕ್ಷಕರು ಸಿದ್ಧಪಡಿಸಿದ್ದಾರೆ.
ವಿಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನು ಮಕ್ಕಳು ಕಲಿಯಲು ಅತಿ ಉಪಯುಕ್ತವಾದ ಪ್ರಯೋಗ ಸಹ ಶಾಲೆಯಲ್ಲಿವೆ. ಇದಲ್ಲದೆ ಶಾಲಾ ಕೊಠಡಿ ಸುತ್ತ ಮೇಲೆ ಕಳೆಗೆ ಗೋಡೆಗಳ ಸುತ್ತ ಎತ್ತ ಕಣ್ಣು ಹಾಯಿಸಿದರೂ ಮಕ್ಕಳಿಗೆ ಪಠ್ಯ ಪಾಠವೇ ಗೋಚರವಾಗುವ ಮಟ್ಟಿಗೆ ಕೊಠಡಿ ಶೈಕ್ಷಣಿಕ ಚಟುವಟಿಕೆಗಳಿಂದ ತುಂಬಿದೆ.
ಇನ್ನೂ ವಿಶೇಷ ಅಂದ್ರೇ, ಈ ಶಾಲಾ ಶಿಕ್ಷಕರು ಸರ್ಕಾರಿ ಶಾಲಾ ಅವಧಿ ಐದು ಗಂಟೆಗೆ ಮುಗಿದರೂ ಸಹ ನಿತ್ಯ ಅರ್ಧ ಗಂಟೆ ಹೆಚ್ಚಿನ ಸಮಯವನ್ನು ಮಕ್ಕಳ ದೈಹಿಕ ಆಟೋಟಕ್ಕೆ ಮೀಸಲಿಟ್ಟು ತಾವು ಮಕ್ಕಳೊಡನೆ ಮಗುವಾಗಿ ಬೆರೆತು ಬಿಡ್ತಾರೆ.
Kshetra Samachara
24/02/2022 12:03 pm