ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಅಕ್ಷರ ಕಲಿಸಿದ ಗುರುವಿಗೆ ಎಂದೂ ಮರೆಯದ ಉಡುಗೊರೆ ಕೊಟ್ಟ ಶಿಷ್ಯರು

ಕುಂದಗೋಳ: ತಮಗೆ ಶಿಕ್ಷಣ ನೀಡಿ ಸನ್ಮಾರ್ಗದ ದಾರಿ ತೋರಿ ಇಂದು ತಾವು ಏನನ್ನಾದರೂ ಕಿಂಚಿತ್ತು ಸಾಧನೆ ಮಾಡಿದ್ರೆ ಅದು ಗುರುಗಳು ಕೃಪೆ ಅಲ್ಲದೇ ಮತ್ತೇನು ? ಎನ್ನುವ ಹರಲಾಪೂರ ಗ್ರಾಮದ ಪ್ರಾಥಮಿಕ ಪ್ರೌಢ ಶಾಲೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಎಂದು ಮರೆಯದ ವಿಶೇಷ ಕೊಡುಗೆಯೊಂದನ್ನು ನೀಡಿದ್ದಾರೆ.

1884 ರಲ್ಲಿ ಸ್ಥಾಪಿತವಾಗಿ ಪ್ರಸ್ತುತ 135 ವರ್ಷ ಅಂದ್ರೆ ಶತಮಾನ ದಾಟಿರುವ ಈ ಹರ್ಲಾಪೂರ ಗ್ರಾಮದ ಶಾಲೆಯಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಓದಿ ಬದುಕು ಕಟ್ಟಿಕೊಂಡಿದ್ದಾರೆ, ಆ ವಿದ್ಯಾರ್ಥಿಗಳಿಗೆ ಅದೆಷ್ಟೋ ಶಿಕ್ಷಕರು ಮಾರ್ಗದರ್ಶನ ಮಾಡಿದ್ದಾರೆ ಆ ಗುರುಳಿಗೆ ಈ ಶಿಷ್ಯ ಬಳಗದವ್ರು ಗುರುವಂದನಾ ಕಾರ್ಯಕ್ರಮ ಏರ್ಪಡಿಸಿ ಇಡೀ ಊರಲೆಲ್ಲಾ ಮೆರವಣಿಗೆ ಜೊತೆ ಸನ್ಮಾನ ಮಾಡಿ ಗುರುಗಳನ್ನೇ ಹಾಡಿ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಕ್ತಿಮಂದಿರದ ವಿಮುಲರೇಣುಕ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿವಹಿಸಿ ಶಿಷ್ಯರು ಗುರುಗಳಿಗಾಗಿ ಏರ್ಪಡಿಸಿದ ಕಾರ್ಯಕ್ರಮ ಕಂಡು ಹಾಡಿ ಹೊಗಳಿದರು. ಇಡೀ ಹರ್ಲಾಪೂರದ ಗ್ರಾಮದ ತುಂಬಾ ಹಬ್ಬದ ವಾತಾವರಣ ಸೃಷ್ಟಿಯಾಗಿ ಡೊಳ್ಳು ಕುಣಿತ ಗುರುಗಳಿಗೆ ಸಾಧನೆಗೆ ವಿಶೇಷ ಗೌರವ ತಂದುಕೊಟ್ಟಿತು.

Edited By : Manjunath H D
Kshetra Samachara

Kshetra Samachara

18/10/2021 12:25 pm

Cinque Terre

32.15 K

Cinque Terre

1

ಸಂಬಂಧಿತ ಸುದ್ದಿ