ಹುಬ್ಬಳ್ಳಿ: ನಗರದ ವಿದ್ಯಾನಗರದ ಕನಕದಾಸ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ, ಮಕ್ಕಳ ಸಾಹಿತ್ಯ ಸಂಭ್ರಮ-2020ರ ಇಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಸಾಪ ಜಿಲ್ಲಾಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿಯವರು ಸೈಕಲ್ ಸವಾರಿ ಮುಖಾಂತರ ಬಂದು, ರಾಷ್ಟ್ರ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳು ಬಿಡಿಸಿದ ವಿಭಿನ್ನ ಬಗೆಯ ಚಿತ್ರಗಳು ಅತ್ಯಂತ ಆಕರ್ಷಕವಾಗಿದ್ದವು. ಮೋತಿಲಾಲ್ ರಾಠೋಡ್, ವೆಂಕಟೇಶ ಭಂಡಾರಿ, ವೈ.ಜಿ.ಭಗವತಿ, ಎಂ.ಎಂ.ಪುರದನಗೌಡರ, ವಿರೇಶ ಕುಬಸದ, ಸುರೇಶ ಕಳಸಣವರ ಮಕ್ಕಳು, ಪಾಲಕರು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು..
Kshetra Samachara
20/12/2020 11:50 am