ಕುಂದಗೋಳ : ಪಟ್ಟಣದ ಅಂಬೇಡ್ಕರ್ ನಗರದ ಮೈಲಾರಲಿಂಗೇಶ್ವರ ದೇವಸ್ಥಾನದ ಕಳಸಾ ರೋಹಣದ ಪ್ರಯುಕ್ತ ಕಳಸದ ಮೆರವಣಿಗೆ ಹಾಗೂ ಮೈಲಾರಪ್ಪನ ಚಾಕರಿ ಕಾರ್ಯಕ್ರಮ ಕುಂದಗೋಳ ಪಟ್ಟಣದಲ್ಲಿ ಇಂದು ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಪಕ್ಕದ ಮೈಲಾರಲಿಂಗೇಶ್ವರನ ಪಾದಗಟ್ಟಿ ಗೋರವಯ್ಯ ವೇಷಧಾರಿಗಳಿಂದ ದೇವರ ಚಾಕರಿ ಕಾರ್ಯಕ್ರಮ ಹಾಗೂ ದೇವರು ಹೊಂದಿಸುವ ಕಾರ್ಯಕ್ರಮ ನಡೆಯಿತು,
ನಂತರದಲ್ಲಿ ಮೈಲಾರಲಿಂಗೇಶ್ವರ ಪಲ್ಲಕ್ಕಿ ಹಾಗೂ ದೇವಸ್ಥಾನದ ಕಳಸ ಕುಂದಗೋಳ ಪಟ್ಟಣದಲ್ಲೆಲ್ಲಾ ಸಂಚರಿಸಿ ದೇವಸ್ಥಾನ ತಲುಪಿತು.
ಈ ಕಾರ್ಯಕ್ರಮದಲ್ಲಿ ಕುಂಭಕೊಡ ಹೊತ್ತ ಮಹಿಳೆಯರು ಮಕ್ಕಳು ಹಬ್ಬದ ವಾತಾವರಣಕ್ಕೆ ಸಾಕ್ಷಿಯಾದರು, ಯುವಕರು ಜಾಂಜ್ ಬಾರಿಸುತ್ತಾ ಸಾಗಿದರು,
ಪಲ್ಲಕ್ಕಿ ಹಾಗೂ ಕಳಸಕ್ಕೆ ಕುಂದಗೋಳ ಪಟ್ಟಣದ ಸಾರ್ವಜನಿಕ ನೈವೈಧ್ಯ ಸರ್ಮಪಿಸಿ ಮೈಲಾರಪ್ಪನ ಭಕ್ತಿಗೆ ಪಾತ್ರರಾದರು.
Kshetra Samachara
19/12/2020 07:43 pm