ಕುಂದಗೋಳ : ಸಂಘಗಳು ಸೇನೆಗಳು ಸಾರ್ವಜನಿಕ ಅಭಿವೃದ್ಧಿ, ನೊಂದವರ ಹಿತಕ್ಕಾಗಿ ದುಡಿಯಬೇಕು ಹಾಗಾದಾಗ ಮಾತ್ರ ನಮ್ಮ ಸಂಘಟನೆಗೆ ಬೆಲೆ ಬರುತ್ತೆ. ಈ ಕರ್ನಾಟಕ ಸಂಗ್ರಾಮ ಸೇನೆ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಿ ತಾಲೂಕಿನಲ್ಲಿ ಹೊಸ ಕ್ರಾಂತಿ ಮಾಡಲು ಭಗವಂತ ಅವರಿಗೆ ಪ್ರೇರಣೆ ತೋರಲಿ ಎಂದು ಕಲ್ಯಾಣಪುರ ಬಸವಣ್ಣಜ್ಜನವರು ಹೇಳಿದರು.
ಅವರು ಕಲ್ಯಾಣಪುರ ಮಠದಲ್ಲಿ ನಡೆದ ತಾಲೂಕು ಕರ್ನಾಟಕ ಸಂಗ್ರಾಮ ಸೇನೆ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಸಸಿಗೆ ನೀರೆರೆದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ ಸದಸ್ಯ ಉಮೇಶ ಹೆಬಸೂರ ಮಾತನಾಡಿ ಈ ಸೇನೆ ಕುಂದಗೋಳ ತಾಲೂಕಿನಲ್ಲಿ ಹೊಸ ಭಾಷ್ಯ ಬರೆಯಲಿ ಎಂದರು. ತಾಲೂಕು ಶಸಾಪ ಅಧ್ಯಕ್ಷ ಜಿ.ಡಿ.ಘೋರ್ಪಡೆ ಮಾತನಾಡಿ ಸಂಗ್ರಾಮ ಸೇನೆ ಕಾರ್ಯಕರ್ತರು ಸಂಪೂರ್ಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಲಿ ಎಂದರು.
ಈ ಸಂದರ್ಭದಲ್ಲಿ ಸಂಗ್ರಾಮ ಸೇನೆ ಕಲಘಟಗಿ ತಾಲೂಕ ಅಧ್ಯಕ್ಷ ಸಾಂತಪ್ಪ ಕುಂಕೂರು, ಉಪಾಧ್ಯಕ್ಷ ಶಂಕರಗೌಡ ಭಾವಿಕಟ್ಟಿ, ಅಕ್ಷರ ದಾಸೋಹ ಅಧ್ಯಕ್ಷೆ ಅಂಜನಾ ಬಡಿಗೇರ, ಕೆಎಲ್ಇ ಉಪ ಪ್ರಾಚಾರ್ಯ ರಮೇಶ್ ಅತ್ತಿಗೇರಿ. ಸಂಗ್ರಾಮ ಸೇನೆ ತಾಲೂಕು ಅಧ್ಯಕ್ಷ ಶಿವಾನಂದಯ್ಯ ಪೂಜಾರ ಸಂಘದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
01/12/2020 03:55 pm