ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಜನಪದ ಸಾಹಿತ್ಯ ನಮ್ಮ ಸಾಂಸ್ಕೃತಿಕ ಜೀವಂತಿಕೆ ಸಂಕೇತ ; ನ್ಯಾಯಾಧೀಶ ಆರ್.ಎಸ್. ಚಿಣ್ಣನ್ನವರ

ಧಾರವಾಡ : ರಾಷ್ಟ್ರದ ಐಕ್ಯತೆ, ಭಾವೈಕ್ಯತೆ ಕಾಪಾಡುವಲ್ಲಿ ಜನಪದ ಸಾಹಿತ್ಯ ಅಮೂಲ್ಯ ಕೊಡುಗೆ ನೀಡಿದ್ದು, ಅದು ನಮ್ಮ ಸಂಸ್ಕøತಿ ಜೀವಂತಿಕೆಯ ಸಂಕೇತವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ ಹೇಳಿದರು.

ನಗರದ ಆಲೂರು ವೆಂಕಟರಾವ್ ಭವನದಲ್ಲಿಂದು ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತವಾಗಿ ಆಯೋಜಿಸಿದ್ದ “ ಸಾಂಸ್ಕೃತಿಕ ಏಕತಾ ದಿನಾಚರಣೆ” ಉದ್ಘಾಟಿಸಿ ಮಾತನಾಡಿದರು.

ವಿವಿಧ ಸಾಂದರ್ಭಿಕ ಜಾನಪದ ಹಾಡಗಳನ್ನು ಹಾಡುವ ಮೂಲಕ ರಾಷ್ಟ್ರದ ಸ್ವಾತಂತ್ರ್ಯಕ್ಕೆ ಮತ್ತು ಒಗ್ಗಟ್ಟಿನ ಬದುಕಿಗೆ ಜನಪದ ಸಾಹಿತ್ಯ ನೀಡಿರುವ ಆಧ್ಯತೆ, ಮಹತ್ವಗಳನ್ನು ಡಾ.ರಾಮು ಮೂಲಗಿ ವಿವರಿಸಿದರು. ಬೆಳ್ಳಿಗಟ್ಟಿ ಗ್ರಾಮದ ಮಹಾದೇವಪ್ಪ ಹರಿಜನ ಗೀಗೀ ಪದಗಳನ್ನು, ಗೋವನಕೊಪ್ಪದ ದುರ್ಗವ್ವ ಪೂಜಾರ ಚೌಡಕಿ ಪದಗಳನ್ನು, ತಡಸಿನಕೊಪ್ಪದ ಗಂಗವ್ವ ಆಡಿನವರ ಅವರು ಸಂಪ್ರದಾಯ ಡೊಳ್ಳಿನ ಪದಗಳನ್ನು, ಮರೇವಾಡದ ಅರ್ಜುನ ಮಾದರ ಅವರು ಕರಡಿ ಮಜಲು ಪ್ರಸ್ತುತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

23/11/2020 04:45 pm

Cinque Terre

12.13 K

Cinque Terre

0

ಸಂಬಂಧಿತ ಸುದ್ದಿ