ಹುಬ್ಬಳ್ಳಿ: ಕೆನರಾ ಬ್ಯಾಂಕ್ 115 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹುಬ್ಬಳ್ಳಿಯ ಶಾಖೆಯಲ್ಲಿಂದು ಹಮ್ಮಿಕೊಳ್ಳಲಾಯಿತು.ಇದೇ ವೇಳೆ ಮಾತನಾಡಿದ ಎಜಿಎಮ್ ಎಚ್.ಶಿವಪ್ಪ,ಕೆನರಾ ಬ್ಯಾಂಕ್ ಸಾರ್ವಜನಿಕರಿಗೆ ಉತ್ತಮ ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಮೂಲಕ 115 ವರ್ಷಗಳನ್ನು ಕೆನರಾ ಬ್ಯಾಂಕ್ ಪೂರೈಸಿದೆ.ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ವಿಲೀನಗೊಂಡ ಮೇಲೆ ಸುಮಾರು 90 ಸಾವಿರ ಜನರು ಉದ್ಯೋಗವನ್ನು ಪಡೆದುಕೊಂಡಿದ್ದಾರೆ.ಅಲ್ಲದೇ ಹತ್ತು ಸಾವಿರಕ್ಕೂ ಹೆಚ್ಚು ಶಾಖೆಗಳು ಭಾರತದ ಕಾರ್ಯನಿರ್ವಹಿಸುತ್ತಿದ್ದು,ವಿದೇಶದಲ್ಲಿ ಕೂಡ ಕೆನರಾ ಬ್ಯಾಂಕ್ ಕಾರ್ಯನಿರ್ವಹಿಸುತ್ತಿವೆ ಎಂದರು.
ಈಗಾಗಲೇ ವರ್ಷದಿಂದ ವರ್ಷಕ್ಕೆ ಕೆನರಾ ಬ್ಯಾಂಕ್ ತನ್ನ ಕಾರ್ಯದಕ್ಷತೆಯನ್ನು ಮತ್ತಷ್ಟು ಸದೃಡಗೊಳಿಸಿಕೊಂಡು ಬೆಳೆಯುತ್ತಿದೆ.ಅಲ್ಲದೇ ಮುಂಬರುವ ದಿನಗಳಲ್ಲಿ ಕೂಡ ನಾವು ಇನ್ನೂ ಉತ್ಕೃಷ್ಟ ಮಟ್ಟದ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಹೆಚ್ಚಿನ ಬ್ಯಾಂಕ್ ವಹಿವಾಟು ನಡೆಸಿದ ಗ್ರಾಹಕರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಅಲ್ಲದೆ ಐವತ್ತಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ 115ನೇ ಸಂಸ್ಥಾಪನಾ ದಿನಾಚರಣೆ ಆಚರಣೆ ಮಾಡಿದರು.
Kshetra Samachara
19/11/2020 06:14 pm