ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಸುನಿಧಿ ಕಲಾಸೌರಭದಿಂದ ಮಕ್ಕಳಿಗಾಗಿ Online ಏಕಪಾತ್ರಾಭಿನಯ ಸ್ಪರ್ಧೆ

ಹುಬ್ಬಳ್ಳಿ : ನಗರದ ಸುನಿಧಿ ಕಲಾಸೌರಭ ವತಿಯಿಂದ ಮಕ್ಕಳಿಗಾಗಿ ಆನ್ ಲೈನ್ ಏಕಪಾತ್ರಾಭಿನಯ ಸ್ಪರ್ಧೆ ಏರ್ಪಡಿಸಲಾಗಿದೆ. 6 ವರ್ಷದಿಂದ 10 ವರ್ಷದ ಬಾಲಕ ಮತ್ತು ಬಾಲಕಿಯರ "ಅ'' ವಿಭಾಗ ಮತ್ತು 11 ವರ್ಷದಿಂದ 14ರ ವರೆಗೆ ಬಾಲಕ ಮತ್ತು ಬಾಲಕಿಯರ " ಬ '' ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕಥಾವಸ್ತು ಆಯ್ದುಕೊಂಡು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಮಕ್ಕಳ ವಿಡಿಯೋ ಕ್ಲಿಪ್ ಗಳನ್ನು ನವೆಂಬರ್ 29, ಸಂಜೆ 6 ಗಂಟೆ ಒಳಗಾಗಿ 7019153772 ಈ WhatsApp ನಂಬರ್ ಗೆ ಕಳಿಸಬಹುದು.

ಸುನಿಧಿ ಕಲಾಸೌರಭ ನಡೆದು ಬಂದ ದಾರಿ, ಉದ್ದೇಶ ಹಾಗೂ ಏಕಪಾತ್ರ ಅಭಿನಯ ಸ್ಪರ್ಧೆ ಕುರಿತು ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ವೀಣಾ ಅಠವಲೆ ಹಾಗೂ ಸ್ಪರ್ಧೆಯ ನಿಯಮಾವಳಿ ಕುರಿತು ರಂಗಾಯಣದ ಮಾಜಿ ನಿರ್ದೇಶಕರು ಹಾಗೂ ಹಿರಿಯ ರಂಗಕರ್ಮಿ ಸುಭಾಷ್ ನರೇಂದ್ರ ವಿವರಿಸಿದ್ದಾರೆ.

ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತರಲು ನಿರಂತರ ಪ್ರೋತ್ಸಾಹ ನೀಡುತ್ತಿರುವ ನಿಮ್ಮ PublicNext ಕಾರ್ಯಕ್ರಮದ ಮೀಡಿಯಾ ಪಾರ್ಟನರ್ ಆಗಿದ್ದು, ಈ ಸ್ಪರ್ಧೆಯ ಎಲ್ಲ ವಿವರಗಳನ್ನು ನಿಮಗೆ ತಲುಪಿಸಲಿದೆ. ವಿಜೇತ ಮಕ್ಕಳ ವಿಡಿಯೋಗಳು ಸಹ PublicNext ದಲ್ಲಿ ಪ್ರದರ್ಶಿತವಾಗಲಿವೆ.

ಬನ್ನಿ ಸ್ಪರ್ಧಾ ನಿಯಮಾವಳಿ ಹಾಗೂ ಇತರ ವಿವರಗಳನ್ನು ಅವರಿಂದಲೇ ಕೇಳೋಣ.

Edited By :
Kshetra Samachara

Kshetra Samachara

19/11/2020 04:38 pm

Cinque Terre

19.73 K

Cinque Terre

1

ಸಂಬಂಧಿತ ಸುದ್ದಿ