ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ರೈತರಿಂದ ಶೀಗೆ ಹುಣ್ಣಿಮೆಯ ಸಂಭ್ರಮ ಸಡಗರ

ಕಲಘಟಗಿ:ತಾಲೂಕಿನಲ್ಲಿ ರೈತ ಬಾಂಧವರು ಶೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಶುಕ್ರವಾರ ಆಚರಿಸಿದರು.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಶೀಗೆ ಹುಣ್ಣಿಮೆ ಹಬ್ಬದ ಸಡಗರ ಮನೆ ಮಾಡಿತ್ತು.ವಿವಿಧ ಭಕ್ಷಗಳನ್ನು ತಯಾರಿಸಿ ಭೂ ತಾಯಿಗೆ ರೈತರು ಚರಗವನ್ನು ಚೆಲ್ಲಿ ಫಸಲು ಹುಲುಸಾಗಿ ಬರಲಿ ಎಂದು ಭಕ್ತಿಯಿಂದ ಬೇಡಿಕೂಂಡರು.

ಉತ್ತರ ಕರ್ನಾಟಕ ಭಾಗದಲ್ಲಿ ಶೀಗೆ ಹುಣ್ಣಿಮೆಗೆ ತನ್ನದೇ ಮಹತ್ವ ಇದ್ದು, ರೈತರು ತಮ್ಮ ತಮ್ಮ ಹೊಲಗಳಲ್ಲಿ ಪಾಂಡವರ ಪೂಜೆ ಮಾಡಿ,ಫಸಲಿಗೆ ಸೀರೆಯನ್ನುಡಿಸಿ ಪೂಜೆ ಸಲ್ಲಿಸಿ ನಂತರ ಚರಗವನ್ನು ಚೆಲ್ಲಿ ಉತ್ತಮವಾದ ಫಸಲು ಬರಲಿ ಎಂದು ಭೂಮಿ ತಾಯಿಯಲ್ಲಿ‌ ಭಕ್ತಿ ಭಾವ ದೊಂದಿಗೆ ಬೇಡಿಕೂಂಡರು.

ರೈತರು ಹೊಲಗಳಲ್ಲಿ ಬಂಧು ಬಾಂಧವರೊಂದಿಗೆ ಬಗೆ ಬಗೆಯ ಭಕ್ಷಗಳನ್ನು ಹಾಗೂ ಭೋಜನ ಸವಿದು ಸಂತಸ ಪಟ್ಟರು.

Edited By : Manjunath H D
Kshetra Samachara

Kshetra Samachara

30/10/2020 05:03 pm

Cinque Terre

16.43 K

Cinque Terre

1

ಸಂಬಂಧಿತ ಸುದ್ದಿ