ಕಲಘಟಗಿ:ತಾಲೂಕಿನ ಶಿಗಿಗಟ್ಟಿ ತಾಂಡಾದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಬಡ ಕುಟುಂಬದ ವಿದ್ಯಾರ್ಥಿನಿಗೆ ಅಧ್ಯಯನದ ಅನುಕೂಲಕ್ಕಾಗಿ ಮಾಜಿ ಸಚಿವ ಸಂತೋಷ ಲಾಡ್ ಅವರು ಉಚಿತವಾಗಿ ಲ್ಯಾಪ್ ಟಾಪ್ ಒದಗಿಸಿ ಜೌದಾರ್ಯತೆಯನ್ನು ತೋರಿಸಿದ್ದಾರೆ.
ಶಿಗಿಗಟ್ಟಿ ತಾಂಡೆಯ ವಾಣಿಶ್ರೀ ಲಮಾಣಿ ಇತ್ತೀಚೆಗೆ ಮಾಜಿ ಸಚಿವ ಸಂತೋಷ್ ಲಾಡ್ ಕಲಘಟಗಿಗೆ ಬಂದಾಗ ಸಾರ್ವಜನಿಕ ಸಭೆಯಲ್ಲಿ ಭೇಟಿಯಾಗಿ ಕರೋನಾದಿಂದ ಎಂಬಿಬಿಎಸ್ ಆನ್ ಲೈನ್ ಕ್ಲಾಸ್ ಕೇಳಲು ತೊಂದರೆಯಾಗಿದೆ.ಲ್ಯಾಪ್ ಟಾಪ್ ತೆಗೆದುಕೊಳ್ಳಲು ತಂದೆ ತಾಯಿ ಬಡವರಿದ್ದಾರೆ,ಸಹಾಯ ಮಾಡ್ರಿ ಎಂದು ಕೇಳಿಕೊಂಡಿದ್ದಳು,ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಓದಿಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗ ಬಾರದು ಎಂದು ಲ್ಯಾಪ್ ಟಾಪ್ ಕಳುಹಿಸುತ್ತೇನೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಅಂದು ವಿದ್ಯಾರ್ಥಿನಿಗೆ ಭರವಸೆಯನ್ನು ನೀಡಿದ್ದರು.ಕೊಟ್ಟ ಮಾತಿನಂತೆ ಲಾಡ್ ಅವರು ಗುರುವಾರ ಬೆಂಗಳೂರಿನಿಂದ ಲ್ಯಾಪ್ ಟಾಪ್ ಕಳುಹಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಲಾಡ್ ಅವರ ಅಮೃತ ನಿವಾಸದಲ್ಲಿ ಲ್ಯಾಪ್ ಟಾಪನ್ನು ವಿದ್ಯಾರ್ಥಿನಿಗೆ ವಿತರಣೆ ಮಾಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ,ಎಸ್ ಆರ್ ಪಾಟೀಲ,ವೈ ಬಿ ದಾಸನಕೊಪ್ಪ,ಲಿಂಗರೆಡ್ಡಿ ನಡುವಿನಮನಿ,ಹರಿಶಂಕರ ಮಠದ,ಸೋಮಣ್ಣ ಬೆನ್ನೂರ,ಭೋಜಪ್ಪ ಲಮಾಣಿ ಉಪಸ್ಥಿತರಿದ್ದರು.
Kshetra Samachara
16/10/2020 05:40 pm