ನವಲಗುಂದ : ನವಲಗುಂದ ತಾಲ್ಲೂಕಿನ ಗೊಬ್ಬರಗುಂಪಿ ಗ್ರಾಮದ ಚರಂಡಿಯಲ್ಲಿ ಅನಾಥ ಗಂಡು ಹಸುಗೂಸೊಂದು ಪತ್ತೆಯಾಗಿದ್ದು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮದ ಮಹಿಳೆಯರು ಮಗುವನ್ನು ರಕ್ಷಿಸಿದ್ದಾರೆ.
ಬೆಳಗಿನ ಸುಮಾರು ಆರು ಗಂಟೆಗೆ ಘಟನೆ ಬೆಳಕಿಗೆ ಬಂದಿದ್ದು, ಮಗುವನ್ನು ಕಂಡ ಮಹಿಳೆಯರು ತಕ್ಷಣ ಸ್ವಚ್ಛಗೊಳಿಸಿ, ಹಾಲುಣಿಸಲು ಬಾನಂತಿಯ ಮನೆಯಲ್ಲಿ ಇರಿಸಲಾಗಿದೆ. ಘಟನೆಯನ್ನು ನವಲಗುಂದ ಪೊಲೀಸ್ ಠಾಣೆಗೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ತಿಳಿಸಲಾಗಿದೆ.
ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನವಲಗುಂದ ತಾಲೂಕಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
Kshetra Samachara
10/10/2022 05:13 pm