ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಕ್ಷೇಪಾರ್ಹ ಪೋಸ್ಟ್‌- ಯುವಕ ಅರೆಸ್ಟ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ತಣ್ಣಗಾಗುತ್ತಿರುವ ಹೊತ್ತಿನಲ್ಲೇ ಕೇಶ್ವಾಪುರದ ಕಿಡಿಗೇಡಿ ಯುವಕನೊಬ್ಬ ಲವ್ ಜಿಹಾದ್ ಎಂದು ಪ್ರಚೋದನಾಕಾರಿ ಪೋಸ್ಟ್ ಹಾಕಿ ವಿವಾದಕ್ಕೆ ಕಾರಣವಾಗಿದ್ದು ಆತನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ.

ಕೇಶ್ವಾಪುರದ ಪವನ್ ಬಂಧಿತ ಆರೋಪಿ. ಬೆಂಡಿಗೇರಿ ಯುವಕ ಹಾಗೂ ಆನಂದನಗರ ಯುವತಿಯ ಕುರಿತು ಕೋಮು ಭಾವನೆ ಕೆರಳಿಸುವ ಸಂದೇಶ ರವಾನಿಸಿದ ಆರೋಪದ ಮೇಲೆ ಪವನ್‌ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮೇ. 19 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ತಪ್ಪು ಕಲ್ಪನೆಯಿಂದ ಅನ್ಯ ಕೋಮಿನ ಯುವಕ ಮತ್ತು ಯುವತಿ ಕುರಿತು ಈತ ಆಕ್ಷೇಪಾರ್ಹ ಪೋಸ್ಟ್ ರವಾನೆ ಮಾಡಿದ್ದ. ಬೆಂಡಿಗೇರಿ ಠಾಣೆ ವ್ಯಾಪ್ತಿಯ ಹುಡುಗನ ದೂರಿನ ಮೇರೆಗೆ ಬೆಂಡಿಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಎರಡು ದಿನಗಳ ಹಿಂದೆ ಬಂಧಿಸಿದ್ದರು.

Edited By : Vijay Kumar
Kshetra Samachara

Kshetra Samachara

08/05/2022 01:45 pm

Cinque Terre

29.93 K

Cinque Terre

14

ಸಂಬಂಧಿತ ಸುದ್ದಿ