ಕುಂದಗೋಳ: ಮತಕ್ಷೇತ್ರದ ತೀರ್ಥ ಗ್ರಾಮದಲ್ಲಿ ದುಷ್ಕರ್ಮಿಗಳ ಕಿಡಗೇಡಿತನಕ್ಕೆ ಹೊಟ್ಟು,ಮೇವು ಹಾಗೂ ರೈತರು ಒಕ್ಕಲು ಮಾಡದೆ ಕಣದಲ್ಲಿ ಸಂಗ್ರಹಿಸಿಟ್ಟ ಸೋಯಾಬಿನ್ ಬೆಳೆ ಸುಟ್ಟು ಬೂದಿಯಾಗಿದೆ.
ಹೌದು ! ಕುಂದಗೋಳ ಮತಕ್ಷೇತ್ರದ ತೀರ್ಥ ಗ್ರಾಮದಲ್ಲಿ ಕಳೆದ ಶನಿವಾರ ದುಷ್ಕರ್ಮಿಗಳು ರಾತ್ರೋ ರಾತ್ರಿ ಬಸವರಾಜ ಮುಂದಿನಮನಿ ಅವರ ಗೋವಿನ ಜೋಳದ ಮೇವು, ಚನ್ನಪ್ಪ ಕಠಾರಿ ಅವರ ಗೋವಿನ ಜೋಳದ ಮೇವು, ಒಕ್ಕಲು ಮಾಡದೆ ಇದ್ದ ಸೋಯಾಬಿನ್ ಬೆಳೆ ಹಾಗೂ ಸಾವಕ್ಕ ಉಣಕಲ್ ಅವರ ಗೋವಿ ಜೋಳದ ಮೇವಿಗೆ ಬೆಂಕಿ ಇಟ್ಟು ಆಟಾಟೋಪ ಮೆರೆದಿದ್ದಾರೆ.
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮೇವು ಹಾಗೂ ರೈತರೊಬ್ಬರ ಸೋಯಾಬಿನ್ ಬೆಳೆ ಸುಟ್ಟು ಅಪಾರ ನಷ್ಟ ಉಂಟಾಗಿದ್ದು ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
Kshetra Samachara
07/03/2022 02:33 pm