ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಭೀಕರ ಕೊಲೆ: ಶವವನ್ನು ರೈಲ್ವೆ ಹಳಿ ಮೇಲೆ ಹಾಕಿದ ದುಷ್ಕರ್ಮಿಗಳು

ಧಾರವಾಡ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಆತನ ಶವವನ್ನು ದುಷ್ಕರ್ಮಿಗಳು ರೈಲ್ವೆ ಹಳಿ ಮೇಲೆ ಮಲಗಿಸಿ ಹೋಗಿರುವ ಘಟನೆ ಧಾರವಾಡ ತಾಲೂಕಿನ ಮುಗದ-ಕ್ಯಾರಕೊಪ್ಪ ನಡುವಿನ ರೈಲು ಹಳಿ ಮೇಲೆ ನಡೆದಿದೆ.

ಹತ್ಯೆಗೀಡಾಗಿರುವ ವ್ಯಕ್ತಿ ಅಂದಾಜು 45 ರಿಂದ 46 ವರ್ಷ ವಯಸ್ಸಿನವನಾಗಿದ್ದು, ಬಿಳಿ ಬಣ್ಣದ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದಾನೆ. ಸಾವಿಗೀಡಾಗಿರುವ ವ್ಯಕ್ತಿಯ ಹೆಸರು, ವಿಳಾಸ ತಿಳಿದು ಬಂದಿಲ್ಲ.

ಆದರೆ, ಯಾವುದೋ ಉದ್ದೇಶಕ್ಕಾಗಿ ಈ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ನಂತರ ಯಾರಿಗೂ ಸಂಶಯ ಬರದಂತೆ ರೈಲು ಹಳಿ ಮೇಲೆ ಮಲಗಿಸಿ ಹೋಗಿದ್ದು, ಆತನ ರುಂಡ, ಮುಂಡ ಬೇರ್ಪಟ್ಟಿವೆ. ಇದು ಕೊಲೆ ಇರಬಹುದು ಎಂದು ಹುಬ್ಬಳ್ಳಿ ರೈಲ್ವೆ ಪೊಲೀಸರು ಸಂಶಯಪಟ್ಟು ದೂರು ದಾಖಲಿಸಿಕೊಂಡಿದ್ದಾರೆ.

Edited By :
Kshetra Samachara

Kshetra Samachara

03/02/2022 10:39 pm

Cinque Terre

54.05 K

Cinque Terre

1

ಸಂಬಂಧಿತ ಸುದ್ದಿ