ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯುವತಿಗೆ ಅಶ್ಲೀಲ ವೀಡಿಯೋ ಕಳಿಸಿದ ಕಾಮುಕನ ಮೇಲೆ ಕೇಸ್ ದಾಖಲು

ಹುಬ್ಬಳ್ಳಿ: ಯುವತಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸುತ್ತಿದ್ದ ವ್ಯಕ್ತಿಯ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ದೂರು ನೀಡಿರುವ ಯುವತಿ ಇನ್ಸ್ಟಾಗ್ರಾಮ್ ನಲ್ಲಿ ಎರಡು ವರ್ಷಗಳಿಂದ ಖಾತೆ ಓಪನ್ ಮಾಡಿದ್ದು, ಯುವತಿಗೆ Sonu Naveen ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ಒಬ್ಬ ರಿಕ್ವೆಸ್ಟ್ ಕಳಿಸಿದ್ದಾನೆ. ಆ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ ಕಾರಣ ಆತ ಯುವತಿಯ ಇನ್ಸ್ಟಾಗ್ರಾಮ್ ನಲ್ಲಿದ್ದ ಫೋಟೋಗಳನ್ನು ತೆಗೆದುಕೊಂಡು ಅವುಗಳಿಗೆ ಅಶ್ಲೀಲ ಚಿತ್ರಗಳಿಗೆ ಎಡಿಟ್ ಮಾಡಿ ಅವುಗಳನ್ನು ಪೇಸ್ ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ಅಪ್ ಲೋಡ್ ಮಾಡುತ್ತೇನೆಂದು ಹೆದರಿಸಿದಲ್ಲದೇ ಯಾರದೋ ಮಹಿಳೆಯರ ನಗ್ನ ಚಿತ್ರಗಳನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದು, ಆತನನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/01/2022 10:32 pm

Cinque Terre

68.49 K

Cinque Terre

4

ಸಂಬಂಧಿತ ಸುದ್ದಿ