ಧಾರವಾಡ: ನಗರದ ಮಾಳಾಪುರ ಹಾಗೂ ಸೈದಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನ ಕಳ್ಳರ ತಮ್ಮ ಕೈಚಳಕ ತೋರಿಸಿ ರಾತ್ರೋರಾತ್ರಿ ಎಸ್ಕೇಪ್ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು. ಈ ದೃಶ್ಯ ಎಲ್ಲರ ನಿದ್ದೆ ಗೆಡಿಸುವಂತೆ ಮಾಡಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ರಾತ್ರಿಯಿಡೀ ಬೈಕ್‌ಗಳನ್ನ ಹುಡುಕುವ ಬೈಕ್ ಕಳ್ಳರ ಗ್ಯಾಂಗ್, ಯಾರೂ ಇಲ್ಲದ ಸಮಯದಲ್ಲಿ ಬೈಕ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಜನರ ನಿದ್ದೆಗೆಡಿಸುವ ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಹಿಂದೆಯೂ ಸಹ ಬೈಕ್ ಗಳನ್ನ ಕದ್ದು ಪರಾರಿಯಾಗಿರುವ ಪ್ರಕರಣ ನಡೆದಿತ್ತು. ಈಗ ಮತ್ತೆ ಹಲವು ಬೈಕ್ ಗಳು ಕಳ್ಳತನ ಆಗುತ್ತಿರುವುದರಿಂದ ಧಾರವಾಡ ಜನ ಆತಂಕದಲ್ಲಿದ್ದಾರೆ. ಹಾಗೂ ಈ ಭಾಗದಲ್ಲಿ ಪೊಲೀಸರ ಬೀಟ್ ಹೆಚ್ಚಿಸುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
Kshetra Samachara
07/11/2021 02:23 pm