ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖೋಟಾ ನೋಟು ಜಾಲ ಪತ್ತೆ - ಕೇಶ್ವಾಪೂರ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ: ಖೋಟಾ ನೋಟು ಜಾಲವನ್ನು ಹುಬ್ಬಳ್ಳಿಯಲ್ಲಿ ಕೇಶ್ವಾಪೂರ ಪೊಲೀಸರು ಪತ್ತೆ ಹಚ್ಚಿದ್ದಾರೆ‌. ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಖೋಟಾ ನೋಟು ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪೂರ ಠಾಣಾ ಹದ್ದಿನಲ್ಲಿ 04 ಜನರು ಖೋಟಾ ನೋಟುಗಳನ್ನು ಚಲವಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಉಪ ಪೊಲೀಸ್ ಆಯುಕ್ತರಾದ ಕೆ.ರಾಮ್‍ರಾಜನ್ ಮತ್ತು ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಕೇಶ್ವಾಪೂರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸುರೇಶ ಜಿ.ಕುಂಬಾರ ಮತ್ತು ಸಿಬ್ಬಂದಿ ತಂಡವು ಕಾರ್ಯಾಚರಣೆ ಮಾಡಿ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಗೋಪಿನಾಥ ಜಗನ್ನಾಥ ಹಬೀಬ, ಶ್ರೀನಿವಾಸ ವಾಸಪ್ಪ ತಟ್ಟಿ, ಮೌಲಾಸಾಬ ಮುಕ್ತಂಸಾಬ ಗೂಡಿಹಾಳ,ಸಲಿಂ ಇಮಾಮಸಾಬ ಮುಲ್ಲಾ ಬಂಧಿತರಾಗಿದ್ದಾರೆ. ಇವರು 500 ರೂ ಮುಖ ಬೆಲೆಯ 93 ಖೋಟಾ ನೋಟುಗಳನ್ನು ಹಾಗೂ 100ರೂ ಮುಖ ಬೆಲೆಯ 200 ಖೋಟಾ ನೋಟುಗಳನ್ನು ( ಒಟ್ಟು 66,500-00 ರೂ ಮೌಲ್ಯದ ಖೋಟಾ ನೋಟುಗಳನ್ನು) ಹಾಗೂ 500 ರೂ ಮುಖ ಬೆಲೆಯ 10 ಅಸಲಿ ನೋಟುಗಳನ್ನು ಮತ್ತು 100 ರೂ ಮುಖ ಬೆಲೆಯ 02 ಅಸಲಿ ನೋಟುಗಳನ್ನು ( ಒಟ್ಟು 5200-00 ರೂ ಮೌಲ್ಯದ ಅಸಲಿ ನೋಟುಗಳನ್ನು) ವಶಪಡಿಸಿಕೊಳ್ಳಲಾಗಿದೆ‌. ಅಲ್ಲದೆ ಆರೋಪಿತರಿಂದ 04 ವಿವಿಧ ಕಂಪನಿಯ ಮೊಬೈಲ್ ಪೋನ್ ಸಹ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಮುಂದುವರೆಸಿದ್ದಾರೆ.ಇನ್ನೂ ಈ ಪ್ರಕರಣವನ್ನು ಪತ್ತೆ ಹಚ್ಚಿದ ಕೇಶ್ವಾಪೂರ ಪೊಲೀಸ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ ಜಿ ಕುಂಬಾರ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.

Edited By : Nirmala Aralikatti
Kshetra Samachara

Kshetra Samachara

05/02/2021 09:28 am

Cinque Terre

72.66 K

Cinque Terre

20

ಸಂಬಂಧಿತ ಸುದ್ದಿ