ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ದಂಪತಿಗಳ ಸಾವಿನ ಸುತ್ತ ಅನುಮಾನದ ಹುತ್ತ

ಧಾರವಾಡ ಜಿಲ್ಲೆಯ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನಡೆದ ಶ್ರೀದೇವಿ ಎಂಬ ಮಹಿಳೆಯ ಭೀಕರ ಕೊಲೆ ಹಾಗೂ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಆಕೆಯ ಗಂಡ ರಾಜುವಿನ ಶವದ ಸಾವಿನ ಸುತ್ತ ಇದೀಗ ಸಾಕಷ್ಟು ಅನುಮಾನಗಳು ಮೂಡಿದ್ದು ಧಾರವಾಡ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.

ನಿನ್ನೆ (ಮಂಗಳವಾರ) ಚಿಕ್ಕಮಲ್ಲಿಗವಾಡ ಗ್ರಾಮದ ಹೊರವಲಯದ ಜಮೀನಿನಲ್ಲಿ ಶ್ರೀದೇವಿ ಎಂಬ ಮಹಿಳೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು,ಆದ್ರೆ ಶ್ರೀದೇವಿ ಶವ ಪತ್ತೆಯಾದ ಕೂಗಳತೆಯ ದೂರದಲ್ಲೇ ಆಕೆಯ ಗಂಡ ರಾಜುವಿನ ಮೃತದೇಹ ಕೂಡಾ ನೇಣು ಬಿಗಿದುಕೊಂಡು ಸಾವನಪ್ಪಿರುವ ರೀತಿ ಪತ್ತೆಯಾಗಿರುವುದು ಇದೀಗ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ಶ್ರೀದೇವಿಯನ್ನು ಕೊಲೆ ಮಾಡಿ ತದನಂತರದಲ್ಲಿ ರಾಜುನನ್ನು ಕೊಲೆ ಮಾಡಿ ನೇಣು ಹಾಕಿದ್ದಾರಾ ಎಂಬ ಹಲವು ಅನುಮಾನಗಳು ಇದೀಗ ಮೂಡಿದ್ದು,ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಸಾಕಷ್ಟು ಆಯಾಮಾಗಳ ಮೂಲಕ ತನಿಖೆ ನಡೆಸಲಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೊಕೇಶ ಜಗಲಾಸರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ಧಾರವಾಡ ಜಿಲ್ಲೆಯಲ್ಲಿ ಈ ಜೋಡಿ ಸಾವು ಇದೀಗ ಸಾಕಷ್ಟು ಸದ್ದು ಮಾಡುತ್ತಿದ್ದು ಎರಡು ಸಾವುಗಳಿಗೆ ನಿಖರವಾದ ಕಾರಣ ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಧಾರವಾಡ

Edited By : Manjunath H D
Kshetra Samachara

Kshetra Samachara

12/10/2022 05:50 pm

Cinque Terre

61.9 K

Cinque Terre

0

ಸಂಬಂಧಿತ ಸುದ್ದಿ