ಕುಂದಗೋಳ: ಆತ ಚೆನ್ನಾಗಿ ಕಾಲೇಜ್ ಕಲಿತು ಸರ್ಕಾರಿ ಕೆಲಸ ಹಿಡಿಬೇಕು ಅಂತ ಮಾಡಿದ್ದ. ಆದರೆ ಆತನ ನತದೃಷ್ಟಕ್ಕೆ ಯಾವ ಕೆಲಸವೂ ಸಿಕ್ಕರಲಿಲ್ಲ. ಇತ್ತ ಮನೆಯವರು ಮಗ ಉದ್ದಾರ ಆಗಲಿ ಅಂತ ಒಂದು ಹಾಲಿನ ಡೈರಿ ಹಾಕಿ ಕೊಟ್ಟಿದ್ದರು. ಹಾಲಿನ ವ್ಯಾಪರದಲ್ಲೇ ಕಷ್ಟಪಟ್ಟು ದುಡ್ಡು, ಮಾಡೋದು ಬಿಟ್ಟು ಅಡ್ಡ ದಾರಿಯಲ್ಲಿ ಕೈ ತುಂಬಾ ದುಡ್ಡು ಮಾಡಲು ಹೋಗಿ ಕೈಗೆ ಕೊಳ ಹಾಕಿಸಿಕೊಂಡು ಜೈಲಿ ಸೇರಿದ್ದಾನೆ. ಅಷ್ಟಕ್ಕೂ ಏನಿದು ಕಥೆ ಅಂತೀರಾ ಈ ಸ್ಟೋರಿ ನೋಡಿ..
ಹೀಗೆ ವಿಧಾನಸೌಧದ ಮುಂಭಾಗದಲ್ಲಿ ಕಾರಿನಲ್ಲಿ ನಿಂತು ಕೈ ಮಾಡುತ್ತಿರುವ ಈ ಆಸಾಮಿ ಹೆಸರು ಸಾಗರ ಕಾಶಪ್ಪನವರ ಅಂತ. ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ನಿವಾಸಿ. ಅಲ್ಲದೆ ಬಿಜೆಪಿಯ ಸಾಮಾಜಿಕ ಜಾಲತಾಣದ ಸದಸ್ಯ ಕೂಡ ಆಗಿದ್ದವ. ಆದರೆ ದುಡ್ಡು ಮಾಡುವ ಸಲುವಾಗಿ ಅಡ್ಡದಾರಿ ಹಿಡಿದ ಈ ಸಾಗರ್ ಕುಂದಗೋಳದಂತಹ ಚಿಕ್ಕ ಪಟ್ಟಣದಲ್ಲಿ ಖೋಟಾ ನೋಟು ದಂಧೆ ಶುರುಮಾಡಿ ಬಿಟ್ಟಿದ್ದ. ಕುಂದಗೋಳ ಪೊಲೀಸರ ಚಾಣಾಕ್ಷತನದಿಂದ ಇದೀಗ ಜೈಲು ಸೇರಿ ಕಂಬಿ ಎಣಿಸುತ್ತಿದ್ದಾನೆ.
ಆರೋಪಿ ಸಾಗರ ಕಾಶಪ್ಪನವರ ಹೊಟ್ಟೆ ಪಾಡಿಗಾಗಿ ಕುಂದಗೊಳದ ನವರತ್ನ ಹೋಟೆಲ್ ಬಳಿ ಹಾಲಿನ ಅಂಗಡಿ ಇಟ್ಟುಕೊಂಡಿದ್ದ. ಹೇಗಿದ್ದರೂ ತನ್ನ ಬಳಿ ಅಮಾಯಕ ರೈತರು ಹಾಗೂ ಸ್ಥಳೀಯರು ಬರುತ್ತಾರೆ. ಅವರಿಗೆ ಖೋಟಾ ನೋಟು ಕೊಟ್ಟು ಸುಲಭವಾಗಿ ಯಾಮರಿಸಬಹುದು ಅಂತ ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದ ಇಬ್ಬರನ್ನ ಸಂಪರ್ಕಿಸಿ ಮತ್ತೊಬ್ಬ ಶಿರಹಟ್ಟಿ ಮೂಲದ ವ್ಯಕ್ತಿಯ ಕಡೆಯಿಂದ 18 ಸಾವಿರ ಅಸಲಿ ಹಣ ಕೊಟ್ಟು 50 ಸಾವಿರ ಖೋಟಾ ನೋಟು ತಂದು ರಾತ್ರೋರಾತ್ರಿ ಖೋಟಾ ದಂದೆ ಶುರುಮಾಡಿದ್ದ. ಅದರಲ್ಲಿ 27 ಸಾವಿರ ಚಲಾವಣೆ ಮಾಡಿದ ನಂತರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ಸ್‌ಪೆಕ್ಟರ್ ಮಾರುತಿ ಗುಳ್ಳಾರಿ ಆರೋಪಿಯಿಂದ 23 ಸಾವಿರ ಖೋಟಾ ನೋಟು, ಪ್ರಿಂಟ್ ಮಾಡಲು ಬಳಸಿದ್ದ ಮಷಿನ್ ಸೇರಿದಂತೆ 4 ಜನರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಸದ್ಯ ಕುಂದಗೋಳ ಪೊಲೀಸರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದು, ಆರೋಪಿಗಳನ್ನ ಮತ್ತೆ ಕಸ್ಟಡಿಗೆ ಪಡೆದು ಈ ದಂಧೆಯ ಮೂಲ ಆರೋಪಿಗಳನ್ನ ಪತ್ತೆ ಹಚ್ಚಬೇಕಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ವಿನಾಯಕ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
08/08/2022 09:11 pm