ಹುಬ್ಬಳ್ಳಿ: ಹುಬ್ಬಳ್ಳಿ ಸ್ಟೇಷನ್ ರಸ್ತೆಯ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಶಂಕರ ಮಿಶ್ರಾ ಅವರಿಗೆ ಬ್ಯಾಂಕ್ ಗ್ರಾಹಕನೆಂದು ಕರೆ ಮಾಡಿ ಸಂದೇಶ ಕಳಿಸಿದ ವ್ಯಕ್ತಿ, ಮಿಶ್ರಾ ಅವರ ಮೂಲಕವೇ ಉದ್ಯಮಿಯೊಬ್ಬರ ಖಾತೆಯಲ್ಲಿದ್ದ 62.30 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಸುಭಾಸ್ ಜವಳಿ ಎಂಬುವರ ಹೆಸರಿನಲ್ಲಿ ಮಿಶ್ರಾ ಅವರಿಗೆ ವಂಚಕ ಕರೆ ಮಾಡಿದ್ದಾನೆ. ವ್ಯವಹಾರಕ್ಕಾಗಿ ಹಣದ ಅಗತ್ಯವಿದ್ದು, ತುರ್ತಾಗಿ ವರ್ಗಾಯಿಸಬೇಕು ಎಂದು ಹೇಳಿದ್ದ. ನಂತರ ನಕಲಿ ಜಿ–ಮೇಲ್ ಐಡಿಯಿಂದ ಹಣದ ಅಗತ್ಯವಿರುವ ಕುರಿತು ಸಂದೇಶ ಕಳುಹಿಸಿದ್ದ. ಅದನ್ನು ನಂಬಿ ಮಿಶ್ರಾ ಅವರು, ವಂಚಕ ಹೇಳಿದ್ದ ಖಾತೆಗೆ ಹಣ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/08/2022 02:26 pm