ಧಾರವಾಡ: ಆಕೆ ಕಳೆದ ಏಳು ವರ್ಷಗಳಿಂದ ಧಾರವಾಡದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದ್ಲು. ಕಂಪನಿಯಲ್ಲೇ ಓರ್ವನ ಪರಸಂಗ ಕೂಡ ಬೆಳೆಸಿದ್ಲು. ಆದ್ರೆ, ಈ ಪರಸಂಗ ಆಕೆಯ ಕೊಲೆಗೂ ಕಾರಣವಾಗಿದೆ. ಆಕೆಯ ಜನ್ಮ ದಿನದಂದೇ ಆಕೆ ಮಸಣ ಸೇರುವಂತಾಗಿದೆ.
ಇದು ಯಾವ ಸ್ಟೋರಿ ಅಂತೀರಾ? ಇಲ್ಲಿದೆ ನೋಡಿ ಡೀಟೆಲ್ಸ್.
ಈ ಫೋಟೋದಲ್ಲಿ ಕಾಣ್ತಾ ಇರುವ ಚೆಲುವೆಯ ಹೆಸರು ಶೋಭಾ ಮಾದರ. ಜುಲೈ 6ರಂದು ಕೊಳೆತ ಸ್ಥಿತಿಯಲ್ಲಿ ಧಾರವಾಡ ಹೊರವಲಯದ ಸವದತ್ತಿ ರಸ್ತೆಯಲ್ಲಿ ಕೊಲೆಯಾಗಿ ಪತ್ತೆಯಾದ ಯುವತಿ. ಇನ್ನು ಫೋಟೋಗೆ ಪೋಸ್ ಕೊಟ್ಟಿರುವ ಈತನ ಹೆಸರು ಮುನೀರ್ ಮಕಾಂದಾರ. ಈತ ಧಾರವಾಡದ ಬರ್ಚಿ ಪ್ಲಾಟ್ ನಿವಾಸಿ. ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಈ ಶೋಭಾ ಮಾದರ ಧಾರವಾಡದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ಲು. ಅದೇ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ ಈ ಮುನೀರ್ ಆಕೆಯ ಜೊತೆಗೆ ಸಲುಗೆ ಬೆಳೆಸಿದ್ದ. ಇಬ್ಬರ ನಡುವೆ ಈ ಸುಲುಗೆ ಜೋರಾಗಿಯೇ ನಡೆದಿತ್ತು. ಆದರೆ ಇವರಿಬ್ಬರ ನಡುವೆ ಮತ್ತೊಬ್ಬ ಎಂಟ್ರಿಯಾಗಿದ್ದೇ ಈ ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಶೋಭಾ ಮುನೀರ್‌ನನ್ನು ಬಿಟ್ಟು ಮತ್ತೊಬ್ಬನ ಸಹವಾಸ ಮಾಡುತ್ತಿದ್ದಾಳೆ ಅಂತ ತಿಳಿದ ಆರೋಪಿ ಮುನೀರ್, ಜುಲೈ 3ರಂದು ಆಕೆಯ ಜನ್ಮ ದಿನದಂದು ಹೊರಗಡೆ ಕರೆದುಕೊಂಡು ಹೋಗಿದ್ದ ಅಲ್ಲಿ ಇವರಿಬ್ಬರ ಮಧ್ಯೆ ತೀವ್ರ ಜಗಳ ಕೂಡ ಸಂಭವಿಸಿದೆ. ಇದರಿಂದ ಕೋಪಗೊಂಡ ಮುನೀರ್ ಶೋಭಾಳನ್ನ ಆಕೆಯ ದುಪ್ಪಟ್ಟದಿಂದಲೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಹೀಗೆ ಕೊಲೆ ಮಾಡಿದ ಶೋಭಾಳನ್ನ ಯಾರಿಗೂ ಗೊತ್ತಾಗದಂತೆ ರಸ್ತೆ ಪಕ್ಕದಲ್ಲಿ ಬಿಸಾಕಿ ಹೋಗಿದ್ದ. ಕೊಲೆಯಾದ ಮೂರು ದಿನಗಳ ನಂತರ ಶೋಭಾ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಶವ ಪತ್ತೆಯಾದ ದಿನವೇ ಕೊಲೆ ಆರೋಪಿ ಮುನೀರ್‌ನನ್ನ ಹೆಡೆಮುರಿ ಕಟ್ಟುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿ ಕೂಡ ಆಗಿದ್ದಾರೆ. ಈ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಈ ಸಂಬಂಧ ಅಟ್ರಾಸಿಟಿ ಕೇಸ್ ಕೂಡ ದಾಖಲಾಗಿದ್ದು, ಆರೋಪಿಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ತನಿಖೆ ನಡೆಸಲಾಗುತ್ತಿದೆ.
Kshetra Samachara
09/07/2022 03:16 pm