ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿರುವ ಬೆನ್ನಲ್ಲೇ ಧರ್ಮಪತ್ನಿ ಸೇರಿದಂತೆ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಹೌದು. ಈಗಾಗಲೇ ಮರಣೋತ್ತರ ಪರೀಕ್ಷೆ ಪೂರ್ಣಗೊಂಡು ಸುಳ್ಳ ರಸ್ತೆಯಲ್ಲಿರುವ ಜಮೀನಿಗೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಮಾಡಲು ಕುಟುಂಬದ ಸದಸ್ಯರು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಹೊರಟಿದ್ದಾರೆ.
ಇನ್ನೂ ಸಹೋದರನ ಮಗ ಸಂಜಯ ಈಗಾಗಲೇ ಪಾರ್ಥಿವ ಶರೀರದ ಜೊತೆಗೆ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಹೊರಟಿದ್ದು, ಚಂದ್ರಶೇಖರ ಗುರೂಜಿಯವರ ಧರ್ಮಪತ್ನಿ ಅಂಕಿತಾ ಅವರು ಕೂಡ ಮನೆಯ ಕಾರ್‌ನಲ್ಲಿಯೇ ಪ್ರಯಾಣ ಬೆಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 01:29 pm