ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ತ್ರಿವಳಿ ಕೊಲೆ ಕೇಸ್- ದೇಶ ಸೇವೆಗೆ ಸಿದ್ಧನಾಗಿದ್ದ ಯೋಧ ಜೈಲು ಪಾಲು

ಹುಬ್ಬಳ್ಳಿ: ಬರೋಬ್ಬರಿ ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಆರ್‌ಪಿಎಫ್ ಯೋಧನಿಗೆ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಪ್ರಕರಣದ ಅಪರಾಧಿಗೆ ಸಿಆರ್‌ಪಿಎಫ್ ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ ಶಿಕ್ಷೆ ಪ್ರಕಟವಾಗಿದೆ. 2010ರಲ್ಲಿ ಮದುವೆಯಾಗಿದ್ದ ಯೋಧ ಶಂಕ್ರಪ್ಪ ಹಾಗೂ ಪತ್ನಿ ನಡುವೆ ವಾಗ್ವಾದ ಉಂಟಾಗಿ ಹೆಂಡತಿ ತವರು ಸೇರಿದ್ದಳು. ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ ಪತ್ನಿ ಜಗಳ ಮಾಡಿ ತವರು ಸೇರಲು ಕಾರಣ ಎಂದು ಭಾವಿಸಿದ ಯೋಧ ತಾಯಿಯ ಆಸ್ತಿಯೂ ತಮ್ಮ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ಸಹಕರಿಸಲಿಲ್ಲ ಎಂಬ ದ್ವೇಷದಿಂದ ಬೆಟದೂರು ಗ್ರಾಮದ ಯಲ್ಲಪ್ಪ ಭಜಂತ್ರಿ (38) ಸೋಮಪ್ಪ ಭಜಂತ್ರಿ (11) ಐಶ್ವರ್ಯ ಭಜಂತ್ರಿ (9)ಯನ್ನು ಅಕ್ರಮವಾಗಿ ತಾನು ಹೊಂದಿದ್ದ ಬಂದೂಕಿನಿಂದ ಗಂಡು ಹಾರಿಸಿ ಹತ್ಯೆ ಮಾಡಿ ಮದನಕುಮಾರ ಎಂಬಾತನನ್ನು ಗಾಯ ಪಡಿಸಿದ್ದನು.

ಈ ವೇಳೆ ಯಲ್ಲಪ್ಪನ ಹೆಂಡತಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಈ ಪ್ರಕರಣ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಹಾಜರಾಗಿತ್ತು, ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವಂದ್ರಪ್ಪ ಎನ್. ಬಿರಾದಾರ ಅಪರಾಧಿಗೆ 24 ವರ್ಷ ಕಠಿಣ ಶಿಕ್ಷೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

09/12/2021 07:23 pm

Cinque Terre

62.19 K

Cinque Terre

1

ಸಂಬಂಧಿತ ಸುದ್ದಿ