ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಡಿಸಿ ಕಚೇರಿ ಎದುರು ಫೈಟ್ ಮಾಡಿದವರ ಮೇಲೆ ಎಫ್‌ಐಆರ್

ಧಾರವಾಡ: ಹಣದ ವಿಚಾರಕ್ಕಾಗಿ ಎರಡು ಗುಂಪುಗಳ ಮಧ್ಯೆ ನಿನ್ನೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ನಡೆದ ಫೈಟ್‌ಗೆ ಸಂಬಂಧಿಸಿದಂತೆ ಉಪನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಫೈಟ್ ಮಾಡಿದವರು ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದಾಫ್ ಹಾಗೂ ಅರ್ಬಾಜ್ ಹಂಚಿನಾಳ ಅವರ ಗುಂಪು ಎಂದು ಪೊಲೀಸರು ಪತ್ತೆ ಹಚ್ಚಿ ಎರಡೂ ಗ್ಯಾಂಗ್ ವಿರುದ್ಧ ದೂರು ದಾಖಲಿಸಿದ್ದಾರೆ.

ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದಾಫ್, ಅಮೀನ್ ಶಿಬಾರಗಟ್ಟಿ, ಅಜಯ ಕೊರವರ (ಮಾಕಡವಾಲೆ), ಫಯಾಜ್ ಮಕಾನದಾರ, ಮೈಲಾರಿ, ನಬೀ, ಮಾಬುಲಿ ಹಾಗೂ ಇತರರು ರೌಡಿಶೀಟರ್ ಫ್ರೂಟ್ ಇರ್ಫಾನ್ ಅಲಿಯಾಸ್ ಸೈಯದ್ ಹಂಚಿನಾಳ ಪುತ್ರ ಅರ್ಬಾಜ್ ಹಂಚಿನಾಳ, ಶಹನವಾಜ್, ರಹೀಮ್ ರಜಬಲಿ, ವಾಸೀಂ ಮುನವಳ್ಳಿ, ಮನು ಅಲಿಯಾಸ್ ಮನ್ಮಥ್, ಸೋಹಿಲ್ ಹಾಲಬಾವಿ, ಫಹೀಂ ಹಾಗೂ ಇತರರ ಮೇಲೆ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಶಾಂತಿಗೆ ಭಂಗ ಮಾಡಿದ್ದಾರೆ ಅಲ್ಲದೇ ಸಾರ್ವಜನಿಕರಿಗೆ ಭಯ ಹುಟ್ಟುವ ಹಾಗೆ ಕೈಕೈ ಮಿಲಾಯಿಸಿದ್ದಾರೆ ಎಂದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Edited By : Vijay Kumar
Kshetra Samachara

Kshetra Samachara

01/12/2021 09:19 pm

Cinque Terre

18.98 K

Cinque Terre

0

ಸಂಬಂಧಿತ ಸುದ್ದಿ