ಹುಬ್ಬಳ್ಳಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಂದರೆ ರಾಷ್ಟ್ರವ್ಯಾಪಿ ಸಾಕಷ್ಟು ಗೌರವ ಇದೆ. ಆದರೆ ಕೆಲವರ ದುರ್ನಡತೆಯಿಂದ ಪೊಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಗೌರವದ ಭಾವನೆಯೇ ದೂರವಾಗಿದೆ. ಪೊಲೀಸರು ಎಂದರೆ ಹೊಡೆಯುವುದೇ ಎಂಬುವಂತೆ ಪೊಲೀಸ್ ಸಿಬ್ಬಂದಿಯೊಬ್ಬ ಅಮಾಯಕರ ಮೇಲೆ ದೌರ್ಜನ್ಯ ಮಾಡಿದ್ದಾರೆ.
ಹೀಗೆ ಹಿಂಬದಿಯ ಭಾಗದಲ್ಲಿ ರಕ್ತ ಮಂಜುಗಟ್ಟಿರುವಂತೆ ಹೊಡೆದಿರುವ ಬಾಸುಂಡೆಗಳು.. ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಜನರು. ಇದಕ್ಕೆಲ್ಲಾ ಸಾಕ್ಷಿಯಾಗಿದ್ದು, ಗೋಕುಲ ರಸ್ತೆಯಲ್ಲಿ ನಡೆದ ಅಮಾನವೀಯ ಘಟನೆ. ಹೌದು. ಶ್ರೀಶೈಲ ಸಂಗಪ್ಪ ಕೇಶನೂರ ಎಂಬುವಂತ ಡ್ರೈವರ್ ತನ್ನ ವಾಹನವನ್ನು ತೊಳೆಯುತ್ತಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಿಎಆರ್ ಇಲಾಖೆಯ ಆರ್.ಎಸ್.ಐ ಒಬ್ಬರು ತನ್ನ ನಾಲ್ವರು ಸಿಬ್ಬಂದಿಗಳೊಂದಿಗೆ ಹೊಡೆದಿದ್ದು, ವ್ಯಕ್ತಿಯ ದೇಹದ ಹಿಂದಿನ ಭಾಗದ ಮೇಲೆ ರಕ್ತ ಮಂಜುಗಟ್ಟಿರುವ ರೀತಿಯಲ್ಲಿ ಗಾಯಗಳಾಗಿವೆ. ಇನ್ನೂ ಪೊಲೀಸ್ ಸಿಬ್ಬಂದಿಯಿಂದ ಹೊಡೆತ ತಿಂದ ವ್ಯಕ್ತಿ ಕಣ್ಣೀರು ಸುರಿಸುತ್ತ ಪೊಲೀಸ್ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಗೋಕುಲ ಗ್ರಾಮದ ಅಕ್ಕನ ಮನೆಯಲ್ಲಿರುವ ಶ್ರೀಶೈಲ, ಮಂಜುನಾಥನಗರ ಕ್ರಾಸ್ ನಲ್ಲಿ ಗಾಡಿ ವಾಷ್ ಮಾಡುವ ಸಂದರ್ಭದಲ್ಲಿ. ಪೊಲೀಸ್ ಅಧಿಕಾರಿ ಅವಾಚ್ಯ ಶಬ್ಧದಿಂದ ಬೈದಾಡಿದ್ದಾನೆ. ಇದರಿಂದ ಕೋಪಗೊಂಡ ಶ್ರೀಶೈಲ ಪೊಲೀಸ್ ಜೊತೆಗೆ ವಾದಕ್ಕೆ ಇಳಿದಿದ್ದಾನೆ. ಇದೇ ಸಂದರ್ಭದಲ್ಲಿ ಆರ್.ಎಸ್.ಐ ಪಿ.ರವಿಕುಮಾರ್ ತಮ್ಮ ಪೊಲೀಸ್ ಜೀಫ್ ತೆಗೆದುಕೊಂಡು ಬಂದು ಸ್ಟೇಷನ್ ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಶ್ರೀಶೈಲ ಮತ್ತು ಮುದ್ದಪ್ಪ ಎಂಬುವ ಯುವಕನನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಮನಬಂದಂತೆ ತಳಿಸಿದ್ದಾರೆ. ಪೊಲೀಸ್ ಇಲಾಖೆ ಈ ನಡೆಯನ್ನು ಖಂಡಿಸಿ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಕೂಡಲೇ ಪೊಲೀಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸುವಂತೆ ಆಗ್ರಹಿಸಿದ್ದಾರೆ.
ಇನ್ನೂ ಹಲ್ಲೆಗೊಳಗಾದ ವ್ಯಕ್ತಿ ಗೋಕುಲ ರೋಡ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
Kshetra Samachara
06/10/2021 04:31 pm