ಧಾರವಾಡ: ಕಳೆದ ಒಂದು ವರ್ಷದಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾದ ಮೂವರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಕೆಲಸದಿಂದ ಬಿಡುಗಡೆಗೊಳಿಸಿದ್ದಾರೆ.
ಕಲಘಟಗಿ ಪೊಲೀಸ್ ಠಾಣೆಯ ಸಂತೋಷ ಭಂಗಿ, ಡಿಎಆರ್‌ನ ಚನ್ನಬಸವ ಅಳ್ನಾವರ ಹಾಗೂ ಮೈಲಾರ ದಾಸನಕೊಪ್ಪ ಎಂಬುವವರೇ ಇದೀಗ ಸೇವೆಯಿಂದ ವಜಾಗೊಂಡವರು.
ಈ ಮೂವರೂ ಪೊಲೀಸ್ ಕಾನ್‌ಸ್ಟೇಬಲ್‌ಗಳು ಕಳೆದ ಒಂದು ವರ್ಷದಿಂದ ಸೇವೆಗೆ ಅನಧಿಕೃತವಾಗಿ ಗೈರಾಗಿದ್ದರು. ಅಲ್ಲದೇ ಗೈರು ಹಾಜರಿಗೆ ಸೂಕ್ತ ಕಾರಣವನ್ನೂ ನೀಡಿರಲಿಲ್ಲ. ಇದನ್ನು ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೂವರೂ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/09/2022 06:49 pm