ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಸಿಬಿಐ ವಿಚಾರಣೆಗೆ ಆಗಮನ..

ಹುಬ್ಬಳ್ಳಿ: ಯೋಗೀಶ್ ಕೊಲೆ ಪ್ರಕರಣದ ವಿಚಾರಣೆಗೆ ಯೋಗೀಶ್ ಗೌಡ ಪತ್ನಿ ಆಗಮಿಸಿದ್ದಾರೆ. ನಿನ್ನೆಯಿಂದ ನಗರದ ಸಿ‌ಎಆರ್ ಮೈದಾನದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ವಿಚಾರಣೆ ನಡೆಸಲಾಗುತ್ತಿದೆ. ಇಂದು ಯೋಗೀಶ್ ಗೌಡ ಪತ್ನಿಯನ್ನು ವಿಚಾರಣೆಗೆ ಕರೆದಿದ್ದು ಸಾಕಷ್ಟು ಕುತೂಹಲ‌ ಮೂಡಿಸಿದೆ.

ಪತಿ ಕೊಲೆಯಾದ ಮೇಲೆ ನಾಟಕೀಯ ಬೆಳೆವಣಿಗೆ ನಡೆದು ಮಲ್ಲಮ್ಮ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಹೀಗಾಗಿ ಮಲ್ಲಮ್ಮ ಕೋಟಿ ಕೋಟಿ ಹಣ‌ ಪಡೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.‌ ಹೀಗಾಗಿ ಎರಡು ಕೋಟಿ ಹಣ ಯಾರ್ಯಾರಿಗೆ ತಲುಪಿದೆ. ಯಾಕೆ ಕೊಟ್ಟಿದ್ದಾರೆ. ಯಾವ ಉದ್ದೇಶದಿಂದ ಕೊಡಲಾಗಿದೆ ಎಂಬ ಬಗ್ಗೆ ಮಲ್ಲಮ್ಮನ ವಿಚಾರಣೆ ನಡೆಸಲಾಗುತ್ತಿದೆ.

ಇನ್ನೂ ವಿನಯ ಕುಲಕರ್ಣಿಯ ಸೋದರಮಾವ ಚಂದ್ರಶೇಖರ ಇಂಡಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಸತತ ಎರಡು ದಿನ ವಿಚಾರಣೆಗೆ ಚಂದ್ರಶೇಖರ ಇಂಡಿ ಆಗಮಿಸಿದ್ದಾರೆ. ಇಂದು ಒಂದೇ ದಿನ ಎರಡು‌ ಕೋಟಿ ಮೂಲವನ್ನು ಹುಡುಕಲು ವಿಚಾರಣೆಯನ್ನು ಚುರುಕುಗೊಳಿಸಲಾಗಿದೆ.

Edited By : Manjunath H D
Kshetra Samachara

Kshetra Samachara

08/11/2020 07:34 pm

Cinque Terre

107.91 K

Cinque Terre

3

ಸಂಬಂಧಿತ ಸುದ್ದಿ