ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹರಿಯುತ್ತಿದೆ ನೆತ್ತರು ಕೋಡಿ; ಪೊಲೀಸ್ ಇಲಾಖೆ ಏನ್ ಮಾಡ್ತಿದೆ ನೋಡಿ..!

ಹುಬ್ಬಳ್ಳಿ ಅಂದರೆ ಸಿದ್ಧಾರೂಢರ ಮಠ, ಮೂರು ಸಾವಿರಮಠ, ನೃಪತುಂಗ ಬೆಟ್ಟದ ನಿಸರ್ಗ ಸೌಂದರ್ಯದ ಜೊತೆಗೆ ದೊಡ್ಡಮಟ್ಟದ ವಾಣಿಜ್ಯ ವಹಿವಾಟು ಎಂದುಕೊಂಡಿದ್ದವರಿಗೆ ಈಗ ಹುಬ್ಬಳ್ಳಿ ಅಂದರೆ ರಕ್ತ ಚರಿತ್ರೆಯೇ ಕಣ್ಣು ಮುಂದೆ ಬರುವಂತಾಗಿದೆ. ಕೇವಲ ಲಿಕ್ಕರ್ ವಿಷಯವಾಗಿ ಅಪಕೀರ್ತಿ ಪಡೆದಿದ್ದ ಹುಬ್ಬಳ್ಳಿ ಇತ್ತೀಚಿಗೆ ಸಾಕಷ್ಟು ಶಾಂತವಾಗಿತ್ತು. ಆದರೆ ಅದ್ಯಾವ ವಕ್ರ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಮಳೆಗಾಲದಲ್ಲಿ ನೀರು ಹರಿಯುವಂತೆ ನೆತ್ತರು ಹರಿಯುತ್ತಿದೆ.

ಹೌದು.. ಮುಖ್ಯಮಂತ್ರಿಯವರ ತವರು ಹುಬ್ಬಳ್ಳಿ ಧಾರವಾಡದಲ್ಲಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಡೆದಿರುವ 38 ಕೊಲೆಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ಹಳೇ ಹುಬ್ಬಳ್ಳಿ ಕೋಮು ಗಲಭೆ, ಗುರೂಜಿ ಚಂದ್ರಶೇಖರ ಹತ್ಯೆ, ಹೀಗೆ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ.

ಇನ್ನು ಕ್ರೈಂ ನಡೆಯುತ್ತಿದ್ದಂತೆಯೇ ರೌಡಿ ಪರೇಡ್ ಮಾಡುವ ಪೊಲೀಸರು ನೆಪಮಾತ್ರದ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬ ಆರೋಪ ಗಂಭೀರವಾಗಿ ಕೇಳಿ ಬರುತ್ತಿದೆ. ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಪಾತ್ರವನ್ನು ಮರೆತಂತೆ ಕಾಣುತ್ತಿದೆ ಹುಬ್ಬಳ್ಳಿ ಖಾಕಿ ಪಡೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕೆಲಸ‌ಮಾಡುತ್ತಿದ್ದಾರೆ ಅನ್ನೋದು ಸಂತೋಷದ ವಿಚಾರ. ಆದರೆ ಈ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಯಾಕೆ ವಿಫಲಾಗುತ್ತಿದ್ದಾರೆ ಎಂಬ ಪ್ರಶ್ನೆ ಅವಳಿನಗರದ ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಲ್ಲಿ ಲಾ ಆ್ಯಂಡ್ ಆರ್ಡರ್ ವಿಫಲವಾಗಿದೆಯಾ ಎಂಬುವಂತ ಅನುಮಾನ ದಟ್ಟವಾಗಿದೆ. ಕ್ರೈಂ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಪೊಲೀಸ್ ಇಲಾಖೆಯ ಭಯವೇ ಇಲ್ಲದಂತಾಗಿದೆ. ಇನ್ನಾದರೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/07/2022 03:18 pm

Cinque Terre

139.22 K

Cinque Terre

28

ಸಂಬಂಧಿತ ಸುದ್ದಿ