ಧಾರವಾಡ: ರಾಮನಗರದ ವನಿತಾ ಸೇವೆ ಸಮಾಜದ ಹತ್ತಿರ ಆಟೋದಲ್ಲಿ ಗಾಂಜಾ ಮಾರಲು ಬಂದಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಹೊಸಯಲ್ಲಾಪುರದ ಆಟೋ ಚಾಲಕ, ಕಲಘಟಗಿಯ ಡೊಂಬರಿಕೊಪ್ಪದ ನಿವಾಸಿ, ಧಾರವಾಡದ ತಪೋವನದ ಹಾಗೂ ರಾಮನಗರದವರು ಎಂದು ಗುರುತಿಸಲಾಗಿದೆ. ಬಂಧಿತರಿಂದ 20 ಸಾವಿರ ರೂ. ಮೌಲ್ಯದ 400 ಗ್ರಾಂ ತೂಕದ ಗಾಂಜಾ ಸೊಪ್ಪು, 65 ಸಾವಿರ ಮೌಲ್ಯದ ಮೊಬೈಲ್ ಸೇರಿ ನಾಲ್ಕು ಮೊಬೈಲ್, 1.50 ಲಕ್ಷ ರೂ ಮೌಲ್ಯದ ಆಟೋ ಸೇರಿದಂತೆ ಒಟ್ಟು 2,57,500 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
08/11/2020 09:34 pm