ಹುಬ್ಬಳ್ಳಿ: ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ನಿಮ್ಮ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಯೋಗದೊಂದಿಗೆ ಮಹಿಳಾ ಸಬಲೀಕರಣದ ಜೊತೆಗೆ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಟೈ ಹುಬ್ಬಳ್ಳಿಯ ವತಿಯಿಂದ ಕೌಶಲ್ಯ-2022 ಬೃಹತ್ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಟೈ ಹುಬ್ಬಳ್ಳಿಯ ಮಹಿಳಾ ವಿಭಾಗವು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಾಗೂ ಮುಂಬರುವ ಹಬ್ಬದ ಋತುವಿನಲ್ಲಿ ಶಾಪಿಂಗ್ ಅನುಭವ ಸೃಷ್ಟಿಸಲು ಇದೇ ಸೆಪ್ಟೆಂಬರ್ 16-17ರಂದು ಹುಬ್ಬಳ್ಳಿ ಗೋಕುಲ ರಸ್ತೆಯ ಹೆಬಸೂರು ಭವನದಲ್ಲಿ ಆಯೋಜಿಸಲಾಗಿದ್ದು, ಮಹಿಳಾ ಕೌಶಲ್ಯದ ದೂರದೃಷ್ಟಿಯಿಂದ ಇಂತಹದೊಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೆ ಮಾಧ್ಯಮ ಬೆಂಬಲವಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೈ ಜೋಡಿಸಿದೆ.
ಇನ್ನೂ ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಹಿಳಾ ಪ್ರತಿಭೆಗಳು ಪೂರಕ ವೇದಿಕೆಯಿಲ್ಲದೇ ತಮ್ಮ ಪ್ರತಿಭೆಗಳ ಅನಾವರಣಕ್ಕೆ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣದ ಜೊತೆಗೆ ಮಹಿಳೆಯರ ಕೌಶಲಗಳ ಅನಾವರಣ ಮಾಡುವ ಮಹತ್ವದ ಕಾರ್ಯಕ್ರಮ ಇದಾಗಿದೆ.
Kshetra Samachara
13/09/2022 04:04 pm