ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರಾವಣ ಮಾಸದಲ್ಲಿಯೂ ಬಿಯರ್ ದಾಖಲೆ ಮಾರಾಟ: ಮದ್ಯಪ್ರಿಯರ ಮನದಿಂಗಿತ ಬದಲು...!

ಹುಬ್ಬಳ್ಳಿ: ಶ್ರಾವಣ ಮಾಸದಲ್ಲಿ ಮದ್ಯ ಹಾಗೂ ಮಾಂಸವನ್ನು ದೂರ ಮಾಡಿ ವೃತ ಆಚರಣೆ ಮಾಡಲು ಜನರು ಮುಂದಾಗುತ್ತಾರೆ. ಆದರೇ ಶ್ರಾವಣದಲ್ಲೂ ಮದ್ಯ ಮಾರಾಟ ಜೋರಾಗಿಯೇ ನಡೆದಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಐಎಂಎಫ್ಎಲ್ (ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್) ಮದ್ಯದ ಪೆಟ್ಟಿಗೆಗಳ ಮಾರಾಟ ಕೊಂಚ ಕುಸಿದಿದ್ದು, ಬಿಯರ್ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ.

ಹೌದು..ಆಗಸ್ಟ್ ತಿಂಗಳಲ್ಲಿ (ಶ್ರಾವಣದ ಅವಧಿ) ಧಾರವಾಡ ಜಿಲ್ಲೆಯಲ್ಲಿ 1,32,648 ಪೆಟ್ಟಿಗೆಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ತಿಂಗಳಲ್ಲಿ 1, 34,275 ಪೆಟ್ಟಿಗೆಗಳು ಮಾರಾಟವಾಗಿದ್ದು, ಪ್ರಮಾಣದಲ್ಲಿ ಕುಸಿತ ಕಂಡಿದೆ. 2021ರ ಆಗಸ್ಟ್‌ನಲ್ಲಿ 54,387 ಬಿಯರ್ ಪೆಟ್ಟಿಗೆ ಮಾರಾಟವಾಗಿದ್ದವು. ಈ ವರ್ಷ ಆಗಸ್ಟ್‌ನಲ್ಲಿ 57,968 ಬಿಯರ್ ಪೆಟ್ಟಿಗೆ ಮಾರಾಟವಾಗಿ ಕೊಂಚ ಏರಿಕೆ ಕಂಡಿದೆ.

ಧಾರವಾಡ ಜಿಲ್ಲೆಯಲ್ಲಿ ಸಿಎಲ್-2, ಸಿಎಲ್-9, ಸಿಎಲ್-7, ಸಿಎಲ್-4, ಎಂಎಸ್ಐಎಲ್ ಸೇರಿ ಒಟ್ಟು 286 ಮದ್ಯ ಮಾರಾಟ ಮಳಿಗೆಗಳು ಇವೆ. ಹುಬ್ಬಳ್ಳಿ ತಾಲೂಕಿನಲ್ಲಿ ಆಗಸ್ಟ್‌ನಲ್ಲಿ 63,511 ಐಎಂಎಲ್ ಮದ್ಯದ ಪೆಟ್ಟಿಗೆಗಳು ಮಾರಾಟವಾಗಿ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಧಾರವಾಡ ತಾಲೂಕು (40,367 ಐಎಂಎಲ್ ಪೆಟ್ಟಿಗೆ ಇದೆ. ಕುಂದಗೋಳ ತಾಲೂಕು (8,364 ಐಎಂಎಲ್ ಪೆಟ್ಟಿಗೆ) ಕೊನೆಯ ಸ್ಥಾನದಲ್ಲಿದೆ. ಬಿಯರ್ ಖರೀದಿಯಲ್ಲೂ ಹುಬ್ಬಳ್ಳಿಗರು ಹಿಂದುಳಿದಿಲ್ಲ. 34,240 ಬಿಯರ್ ಪೆಟ್ಟಿಗೆಗಳು ಮಾರಾಟವಾಗಿವೆ. ನಂತರದ ಸ್ಥಾನ ಧಾರವಾಡ (17,347 ಬಿಯರ್ ಪೆಟ್ಟಿಗೆ ), ಕುಂದಗೋಳ ತಾಲೂಕು (1,526 ಬಿಯರ್ ಪೆಟ್ಟಿಗೆ) ಕೊನೆಯ ಸ್ಥಾನದಲ್ಲಿದೆ. ಬಿಯರ್ ಮಾರಾಟ ಕಳೆದ ವರ್ಷಕ್ಕಿಂತ ತುಸು ಹೆಚ್ಚಿಗೆ ಆಗಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಶ್ರಾವಣ ಮಾಸದಲ್ಲಿ ಮದ್ಯ ಕುಡಿಯುವವರ ಸಂಖ್ಯೆ ಕಡಿಮೆ ಎಂಬ ಅಂದಾಜಿದೆ. ಪೂಜೆ, ಪುನಸ್ಕಾರ, ಧಾರ್ಮಿಕ ಆಚರಣೆಯಲ್ಲಿ ಬಹಳಷ್ಟು ಜನರು ತೊಡಗಿರುತ್ತಾರೆ. ಆದರೆ, ಮದ್ಯ ಖರೀದಿ ಭರಾಟೆ ನೋಡಿದರೆ, ಕೆಲ ಜನರು ತಮ್ಮ ಮನದಿಂಗಿತವನ್ನು ಬದಲಾಯಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಅದರಲ್ಲೂ ಬಿಯರ್ ಕುಡಿಯುವವರ ಸಂಖ್ಯೆ ಹೆಚ್ಚುತ್ತಿದೆ. ಯುವಕರು ಬಿಯರ್ ರುಚಿ ಸವಿಯಲು ಮುಂದಾಗುತ್ತಿರಬಹುದು ಎಂಬ ಅಂದಾಜಿದೆ.

Edited By : Nagaraj Tulugeri
Kshetra Samachara

Kshetra Samachara

09/09/2022 01:38 pm

Cinque Terre

27.56 K

Cinque Terre

5

ಸಂಬಂಧಿತ ಸುದ್ದಿ