ಹುಬ್ಬಳ್ಳಿ: ಮುಂಗಾರು ಆರಂಭವಾಗುತ್ತಿದ್ದಂತೆಯೇ ಕೃಷಿ ಕಾಯಕದಲ್ಲಿ ಬಿತ್ತನೆ ಕಾರ್ಯ ಚುರುಕುಗೊಳ್ಳುವಂತೆ ನವೋದ್ಯಮಿಗಳಿಗೆ ಸೂಕ್ತ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮುಂಗಾರು ಆರಂಭದಲ್ಲಿಯೇ ದೇಶಪಾಂಡೆ ಸ್ಟಾರ್ಟ್ ಅಪ್ ನಿಂದ ಸ್ಟಾರ್ಟ್ ಅಪ್ ಡೈಲಾಗ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಇನ್ನು, ಕಾರ್ಯಾಗಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ದೇಶಪಾಂಡೆ ಫೌಂಡೇಶನ್ ಸಹಸಂಸ್ಥಾಪಕರಾದ ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ನೆಟ್ ವರ್ಕ್ 18 ಗ್ರೂಪ್ ಅಧ್ಯಕ್ಷರಾದ ಅದಿಲ್ ಜೈನುಬಾಯ್, ವರ್ಚುವಲ್ ಮೂಲಕ ನವೋದ್ಯಮಿಗಳಿಗೆ ಉತ್ಸಾಹ ತುಂಬಿದರು.
ಕೋವಿಡ್ ನಂತರದಲ್ಲಿ ಸ್ಟಾರ್ಟ್ ಅಪ್ ಗಳಿಗೆ ಸೂಕ್ತ ಉತ್ತೇಜನ ನೀಡುವ ಮೂಲಕ ಭವ್ಯ ಭಾರತದ ಆರ್ಥಿಕ ಹಾಗೂ ತಂತ್ರಜ್ಞಾನದ ಅಭಿವೃದ್ಧಿಗೆ ಅಡಿಪಾಯ ಹಾಕಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಾಗಾರಕ್ಕೆ ಹಲವಾರು ನವೋದ್ಯಮಿಗಳು ಹಾಗೂ ಉದ್ಯಮಿಗಳು ಆಗಮಿಸಿ ತಮ್ಮ ಕಾರ್ಯದಕ್ಷತೆ ಹಾಗೂ ಬೆಳೆದು ಬಂದ ದಾರಿಯನ್ನು ಪರಿಚಯಿಸಿದರು.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ಮೂಲಕ ಮಾತನಾಡಿದ ದೇಶಪಾಂಡೆ ಸ್ಟಾರ್ಟ್ ಅಪ್ ಸಿಇಒ ಅರವಿಂದ ಚಿಂಚೋರೆ, ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಸ್ಟಾರ್ಟ್ ಅಪ್ ಡೈಲಾಗ್ ಕಾರ್ಯಕ್ರಮ ಯುವ ಸಮುದಾಯಕ್ಕೆ ಪೂರಕವಾದ ಮಾರ್ಗದರ್ಶನದ ಕಾರ್ಯಾಗಾರವಾಗಿ ಮಾರ್ಪಟ್ಟಿದ್ದು, ಇಲ್ಲಿ ಎಲ್ಲರೂ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು, ಸ್ವತಃ ಕೇಂದ್ರ ಸಚಿವರು ಕೂಡ ತಾವೊಬ್ಬ ಉದ್ಯಮಿಯಾಗಿ ನಡೆದುಬಂದ ದಾರಿಯ ಕುರಿತು ಹೇಳಿದರು.
ಹುಬ್ಬಳ್ಳಿಯ ಹೊರವಲಯದಲ್ಲಿರುವ ಸ್ಟಾರ್ಟ್ ಅಪ್ ಗೆ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ಸಾಧಕರು ತಮ್ಮ ಸಾಧನೆಯ ಬಗ್ಗೆ ಮಾತ್ರವಲ್ಲದೆ, ಉದ್ಯಮಕ್ಕೆ ಅವಶ್ಯಕತೆ ಇರುವ ಪ್ರೋತ್ಸಾಹ- ಮಾರ್ಗದರ್ಶನ ಬಗ್ಗೆ ಮಾಹಿತಿ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/06/2022 08:02 pm