ಹುಬ್ಬಳ್ಳಿ: ಟೈಮ್ಸ್ ಸಮೂಹ ಸಂಸ್ಥೆಯ ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ದಿ ಸ್ಕ್ವಾಯರ್ ಪ್ರಾಯೋಜಕತ್ವದಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಗೋಕುಲ ಗಾರ್ಡನ್ ನಲ್ಲಿ ಆಯೋಜಿಸಲಾಗಿದ್ದ ಪ್ರಾಪರ್ಟಿ & ಲೈಫ್ ಸ್ಟೈಲ್ ಎಕ್ಸ್ ಪೋಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇಂದು ಭೇಟಿ ನೀಡಿ ವೀಕ್ಷಿಸಿದರು. 3 ದಿನಗಳ ಎಕ್ಸ್ ಪೋ ಸಾಕಷ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಗ್ರಾಹಕರಿಗೆ ಒಂದೇ ಸೂರಿನಡಿ ಮನೆ, ನಿವೇಶನ, ಪೀಠೋಪಕರಣ, ಸೌಂದರ್ಯ ವರ್ಧಕ, ಬಟ್ಟೆ, ಅಲಂಕಾರಿಕ ವಸ್ತು, ಗೃಹ ಉತ್ಪನ್ನ, ಕರಕುಶಲ ವಸ್ತು ಮತ್ತು ಮನೆಯ ಲೈಫ್ ಸ್ಟೈಲ್ ಗೆ ಅಗತ್ಯ ಪೀಠೋಪಕರಣ ಒದಗಿಸುವ ಸದುದ್ದೇಶದಿಂದ ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ ಪ್ರಾಪರ್ಟಿ ಆ್ಯಂಡ್ ಲೈಪ್ ಸ್ಟೈಲ್ ಎಕ್ಸ್ ಪೋವನ್ನು ಸಚಿವರು ವೀಕ್ಷಿಸಿ, ವಿಜಯ ಕರ್ನಾಟಕ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಪ್ರಾಪರ್ಟಿ ಆ್ಯಂಡ್ ಲೈಪ್ ಸ್ಟೈಲ್ ಎಕ್ಸ್ ಪೋದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ವೀಕ್ಷಣೆ ಮಾಡಿದ ಸಚಿವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಎಕ್ಸ್ ಪೋ ಮೂಲಕ ಜನರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಅಭಿಯಾನಗಳನ್ನು ಜಾರಿಗೆ ತರಲಿ ಎಂದು ಶುಭ ಕೋರಿದ್ದಾರೆ.
Kshetra Samachara
29/05/2022 09:33 pm