ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಜಯ ಕರ್ನಾಟಕ ಎಕ್ಸ್ ಪೋಗೆ ಚಾಲನೆ; ಶುಭ ಹಾರೈಸಿದ ಶ್ರೀಗಳು, ಸಚಿವರು

ಹುಬ್ಬಳ್ಳಿ: ಟೈಮ್ಸ್ ಸಮೂಹ ಸಂಸ್ಥೆಯ ವಿಜಯ ಕರ್ನಾಟಕ ಪತ್ರಿಕೆಯ ವತಿಯಿಂದ ದಿ ಸ್ಕ್ವಾಯರ್ ಪ್ರಾಯೋಜಿತದಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಗೋಕುಲ ಗಾರ್ಡನ್‌ನಲ್ಲಿ ಆಯೋಜಿಸಲಾಗಿದ್ದ ಪ್ರಾಪರ್ಟಿ ಆ್ಯಂಡ್ ಲೈಫ್ ಸ್ಟೈಲ್ ಎಕ್ಸ್‌ಪೋವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು.

ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ಮನೆ, ನಿವೇಶನ, ಪೀಠೋಪಕರಣಗಳು, ಸೌಂದರ್ಯವರ್ಧಕಗಳು, ಬಟ್ಟೆಗಳು, ಅಲಂಕಾರಿಕ ವಸ್ತುಗಳು, ಗೃಹ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಮನೆಯ ಲೈಫ್ ಸ್ಟೈಲ್‌ಗಳಿಗೆ ಅಗತ್ಯ ಪೀಠೋಪಕರಣಗಳನ್ನು ಒದಗಿಸುವ ಸದುದ್ದೇಶದಿಂದ ವಿಜಯ ಕರ್ನಾಟಕ ಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ ಪ್ರಾಪರ್ಟಿ ಆ್ಯಂಡ್ ಲೈಪ್ ಸ್ಟೈಲ್ ಎಕ್ಸ್ ಪೋಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಎಕ್ಸಪೋ ಯಶಸ್ವಿಗೆ ಶುಭ ಹಾರೈಸಿದರು.

ಇನ್ನೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿರುವ ಪ್ರಾಪರ್ಟಿ ಆ್ಯಂಡ್ ಲೈಫ್ ಸ್ಟೈಲ್ ಎಕ್ಸ್ ಪೋದಲ್ಲಿ ನಿರ್ಮಾಣ ಮಾಡಿರುವ ಮಳಿಗೆಗಳನ್ನು ವೀಕ್ಷಣೆ ಮಾಡಿದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರು ಕೂಡ ಎಕ್ಸ್‌ಪೋಗೆ ಹಾಗೂ ವಿಜಯ ಕರ್ನಾಟಕ ತಂಡಕ್ಕೆ ಶುಭ ಕೋರಿದರು.

ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಜನರಿಗೆ ಒಂದೇ ಸೂರಿನಡಿಯಲ್ಲಿ ಹಲವು ಬಗೆಯ ಗೃಹೋಪಯೋಗಿ ಹಾಗೂ ನಿವೇಶನ ದೊರೆಯುವಂತೆ ಮಾಡುವ ಕಾರ್ಯಕ್ಕೆ ವಿಜಯ ಕರ್ನಾಟಕ ಪತ್ರಿಕೆಯು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಎಕ್ಸ್‌ಪೋ ಮೂಲಕ ಜನರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಅಭಿಯಾನಗಳನ್ನು ಜಾರಿಗೆ ತರಲಿ ಎಂಬುವುದು ನಮ್ಮ ಆಶಯ.

Edited By : Nagesh Gaonkar
Kshetra Samachara

Kshetra Samachara

27/05/2022 04:32 pm

Cinque Terre

37.64 K

Cinque Terre

0

ಸಂಬಂಧಿತ ಸುದ್ದಿ