ಕುಂದಗೋಳ : ವಾತಾವರಣ ಏರು ಪೇರಿನ ಪರಿಣಾಮ ನಿತ್ಯ ಬಾಯಿ ಚಪ್ಪರಿಸಿ ತಿನ್ನುವ ಇಲ್ಲೋಂದು ಪದಾರ್ಥಕ್ಕೆ ಬಾರಿ ಬೆಲೆ ಬಂದಿದೆ ಬೇಡಿಕೆಯೂ ಅತಿಯಾಗಿ ಹಸಿರು ಸುಂದರಿ ಬೆಲೆ ಕೇಳಿದವರು ಶಾಕ್ ಆಗಿದ್ದಾರೆ.
ಯಾರು ಈ ಹಸಿರು ಸುಂದರಿ ಅಂದ್ರಾ ! ಇವಳೇ ಸ್ವಾಮಿ ಯಾವುದೇ ಮಂಗಳ ಕಾರ್ಯ, ಶುಭ ಸಮಾರಂಭ, ಪೂಜೆ, ಕಾರ್ಯಕ್ರಮ ಮುಖ್ಯವಾದ ಮತ್ತು ಪಾನಶಾಪ್'ಗಳಲ್ಲಿ ಬೇಡಿಕೆಯುಳ್ಳ ಅಡಿಕೆಗೆ ಜೊತೆಯಾಗುವ ವಿಳ್ಯದೆಲೆ.
ಈಗ ವಿಳ್ಯದೆಲೆಗೆ ಬೇಡಿಕೆಗೆ ನೂರಕ್ಕೆ ನೂರೈವತ್ತು ರೂಪಾಯಿ ಬೆಲೆ ಇದೆ, ಅದರಲ್ಲೂ ಪೈಪೊಟಿ ಬೇರೆ, ನಿಮಗೆ ಅತಿ ಚಲೋ ವಿಳ್ಯದೆಲೆ ಬೇಕಂದ್ರೇ ನೂರು ಎಲೆಗೆ ಇನ್ನೂರು ರೂಪಾಯಿ ಕೊಡಲೇಬೇಕು ಸ್ವಾಮಿ.
ಇನ್ನೂ ಇತ್ತ ಸವಣೂರು, ಕಾರಡಗಿ ಎಲೆ ತೋಟಗಳಲ್ಲಿ ಅರ್ಧ ಎಲೆ ಚೆನ್ನಾಗಿದ್ರೇ ಇನ್ನರ್ಧ ವಾತಾವರಣದ ಏರು ಪೇರು ಇಬ್ಬನಿಗೆ ಬೆಳೆ ಕೊಳತ್ರೇ ಅರ್ಧ ಹಳದಿಯಾಗಿ ಜನರ ಬೇಡಿಕೆಗೆ ಅನುಗುಣವಾಗಿ ಫಲ ಬಂದಿಲ್ಲಾ. ಈ ಕಾರಣ ಹಸಿರು ಸುಂದರಿ ಬೆಲೆ ಏರಿದೆ.
ಒಟ್ಟಾರೆ ಅಡಿಕೆಗೆ ಜೊತೆಯಾಗೋ ಶುಭ ಕಾರ್ಯಕ್ಕೆ ಮುಖ್ಯವಾದ ಹಸಿರು ಸುಂದರಿ ಕುಂದಗೋಳ ಸಂತೆಯಲ್ಲಿ ಬಹು ಬೇಡಿಕೆ ಪಡೆದು ಗ್ರಾಹಕರ ಮನೆ ಸೇರಿದ್ದಾಳೆ.
Kshetra Samachara
20/01/2022 11:17 am