ಹುಬ್ಬಳ್ಳಿ: ಯುವಕರೇ-ಯುವತಿಯರೇ. ನಿಮ್ಮಲ್ಲಿ ಹೊಸ ಐಡಿಯಾ ಇದ್ದರೇ ರೆಡಿ ಆಗಿ. ನಿಮ್ಮ ಈ ಯೋಚನೆಗೆ ಸಾಥ್ ಕೊಡಲು, ಬೆಂಬಲ ನೀಡಲು ದೇಶಪಾಂಡೆ ಫೌಂಡೇಶ್‌ಮತ್ತೆ ವೇದಿಕೆ ಕಲ್ಪಿಸಿದೆ. ಯಾವುದೇ ಕ್ಷೇತ್ರದಲ್ಲಿ ಆದರೂ ಸರಿಯೇ. ನೀವು ಹೊಸ ಐಡಿಯಾಗಳನ್ನು ಹೊಂದಿದ್ದರೆ ದೇಶಪಾಂಡೆ ಫೌಂಡೇಶನ್ ಸ್ಟಾರ್ಟಪ್ ನಲ್ಲಿ ನಿಮಗೆ ಅವಕಾಶ ಇದ್ದೇ ಇದೆ.
ಹೌದು. ದೇಶಪಾಂಡೆ ಫೌಂಡೇಶನ್‌ನಲ್ಲಿ ಇದಕ್ಕಾಗಿಯೇ ನಿಧಿ ಮೀಸಲಾಗಿದೆ. ನೀವೂ ಇಲ್ಲಿಗೆ ಬಂದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ದೇಶಪಾಂಡೆ ಸ್ಟಾರ್ಟಪ್ ಸಿಇಓ ಬೆಂಜುಮಿನ್ ಮ್ಯಾಥ್ಯುವ್, ದೇಶಪಾಂಡೆ ಸ್ಟಾರ್ಟಪ್ ಡೈರೆಕ್ಟರ್ ವಿಜಯ ಮಾನೆ ಹೇಳಿದರು.
ಈಗಾಗಲೇ ದೇಶಪಾಂಡೆ ಸ್ಟಾರ್ಟಪ್ ನ ನಿಧಿ ಇಐಆರ್ ( ಆಂತ್ರಾಪ್ರೂನರರ್ಸ್ ಇನ್ ರೆಸಿಡೆನ್ಸ್) ಯೋಜನೆಗೆ ಅರ್ಜಿ ಆಹ್ವಾನ ಮಾಡಿದೆ. ಅರ್ಜಿ ಸಲ್ಲಿಸುವುದು http://bit.ly/nidhieir4 ಹಾಗೂ 9513977733 ಕ್ಕೆ ಸಂಪರ್ಕಿಸಬಹುದು. ಕೊನೆಯ ದಿನಾಂಕ ಜ. 20. 2022 ಆಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/01/2022 12:30 pm