ಹುಬ್ಬಳ್ಳಿ: ನಮಸ್ಕಾರ ರೀ ಹುಬ್ಬಳ್ಳಿ-ಧಾರವಾಡ ಮಂದಿಗೆ... ನೋಡ್ರಿ ಇಷ್ಟ ದಿನ ಭಾರಿ ಚೊಲೋ ಗಿರಮಿಟ್ ಮಂಡಕ್ಕಿ, ಮಿರ್ಚಿ ತಿಂದಿರಿ... ಈಗ ನಿಮ್ಮ ನಾಲಿಗೆಗೆ ಮಾತ್ರವಲ್ಲ ನಿಮ್ಮ ಮನಸ್ಸಿಗೆ ಮುದ ನೀಡುವ ಒಂದು ವಿನೂತನ ಶೈಲಿಯ ಹೊಟೇಲ್ ಪರಿಚಯಿಸುತ್ತಿದ್ದೇವೆ ನೋಡ್ರಿ...
ಅರೆರೇ.... ಇದೇನ್ರೀ ರೈಲು ಬಂತು... ರೈಲು ಅಂದುಕೊಂಡ್ರಾ... ಇದೇ ನೋಡ್ರಿ ನಮ್ಮ ಹುಬ್ಬಳ್ಳ್ಯಾಗ ಹೊಸತಾಗಿ ಸ್ಟಾರ್ಟ್ ಆಗಿರುವ ಪೃಥ್ವಿ ಪ್ಯಾರಡೈಸ್.. ಇಲ್ಲಿ ಸರ್ವೀಸ್ ನೀಡುವುದಕ್ಕೆ ಯಾವುದೇ ಸಪ್ಲೈಯರ್ ಬದಲಿಗೆ ರೈಲಿನಿಂದಲೇ ನಿಮಗೆ ಸಪ್ಲೈ ಮಾಡಲಾಗುತ್ತದೆ. ರೈಲು ಅಂದರೆ ಸರಕು ಹಾಗೂ ಪ್ರಯಾಣಿಕರನ್ನು ಹೊತ್ತಕೊಂಡು ಹೋಗೋದನ್ನ ನೋಡಿವಿ ಆದರೆ ಈಗ ಪೃಥ್ವಿ ಪ್ಯಾರಡೈಸ್ ಹೋಟೆಲ್ ಒಳಗೆ ಆರ್ಡರ್ ಕೊಟ್ಟರೇ ಸಾಕು ನೋಡ್ರಿ ನಿಮ್ಮ ಆರ್ಡರ್ ರೈಲ್ವೆ ಮೂಲಕವೇ ಸಪ್ಲೈ ಆಗುತ್ತೇ.. ಅರೇ ಇದು ಸುಳ್ಳು ಅಲ್ಲರೀ... ಇದು ನಿಜಾನ ಐತಿ ನೋಡ್ರಿ ಹುಬ್ಬಳ್ಳಿ ವಿದ್ಯಾನಗರದ ಹೊಸ ಕೋರ್ಟ್ ಹತ್ತಿರ ದೊಡ್ಡ ಕಟ್ಟಡದ ಒಳಗೆ ಮಸ್ತ ಆಗಿ ತಲೆ ಎತ್ತಿದೆ ನೋಡ್ರಿ ಪೃಥ್ವಿ ಪ್ಯಾರಡೈಸ್ ಹೋಟೆಲ್..
ಹಂಗಾದರೇ ಈ ರೀತಿಯ ರೈಲ್ವೆ ಸಪ್ಲೈ ಸರ್ವೀಸ್ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಪ್ರಯತ್ನ ಹಾಗಿದ್ದರೇ ಕೇಳಿ ಬಿಡ್ರಿ ಏನೆಲ್ಲಾ ವ್ಯವಸ್ಥೆ ಐತಿ... ಏನೆಲ್ಲಾ ಸಿಗತೈತಿ ಅಂತ...
ಕೇಳಿದ್ರಲ್ಲ ಇಲ್ಲಿ ಭಾರಿ ಮಸ್ತ..ಮಸ್ತ... ಖಾದ್ಯಗಳು, ಊಟ, ಉಪಹಾರ ಸಿಗತೈತಿ.. ಅಷ್ಟೇ ಅಲ್ಲದೇ ನಿಮ್ಮ ಆರೋಗ್ಯದ ಕಾಳಜಿ ಕೂಡ ಹೋಟೆಲ್ ಗೆ ಅವಶ್ಯ ಐತಿ. ಇನ್ನ..ಸುಂದರ ಡಿಸೈನ್ ಮಾಡಿ ಹೊಟೇಲ್ ನಿರ್ಮಾಣ ಮಾಡ್ಯಾರ... ಝಮ್..ಝಮ್...ಅನ್ನುವಂಗ ಕುಳಿತುಕೊಂಡು ಊಟ ಮಾಡೋಕೆ, ಫ್ಯಾಮಿಲಿ, ಫ್ರೆಂಡ್ಸ್ ಎಲ್ಲರ ಜೊತೆಗೆ ಖುಷಿನ ಹಂಚಿಕೊಳ್ಳೊಕೆ ಹುಬ್ಬಳ್ಳಿ-ಧಾರವಾಡ ಮಂದಿಗೆ ಹೊಸ ಅನುಭವವನ್ನು ನೀಡುವುದಕ್ಕೆ ಪೃಥ್ವಿ ಪ್ಯಾರಡೈಸ್ ನಿರ್ಮಾಣ ಆಗೈತಿ.
ನಿಮಗೆ ಉತ್ಕೃಷ್ಟ ಗುಣಮಟ್ಟದ ಆಹಾರದ ಜೊತೆಗೆ ವಿಶೇಷ ಸ್ಟೈಲ್ ನಲ್ಲಿ ಸಪ್ಲೈ ಕೂಡ ಸಿಗತೈತಿ.. ಇನ್ನ ಮನೆಯಲ್ಲಿ ಕುಳಿತ ಮಕ್ಕಳು ಹಾಗೂ ಮಹಿಳೆಯರಿಗೆ ಹೊಸ ಎಂಟರ್ಟೈನ್ಮೆಂಟ್ ನೀಡೋಕೆ ಈ ಹೋಟೆಲ್ ಸ್ಟಾರ್ಟ್ ಮಾಡ್ತಿದ್ದಾರೆ ನೋಡ್ರಿ.. ಮತ್ಯಾಕ ತಡ ಮಾಡ್ತಿರೀ ಇವತ್ತೇ ನಿಮ್ಮ ಪ್ಯಾಮಿಲಿ ಕರಕೊಂಡು.. ದೋಸ್ತರ ಜೊತೆಗೆ ಹೆಗಲ ಮೇಲೆ ಕೈ ಹಕ್ಕೊಂಡು ಬರ್ರಿ...
ಪೃಥ್ವಿ ಪ್ಯಾರಡೈಸ್
ಹೊಸ ಕೋರ್ಟ್ ಹತ್ತಿರ
ವಿದ್ಯಾನಗರ ಹುಬ್ಬಳ್ಳಿ..
Kshetra Samachara
07/09/2021 09:04 am