ಪೃಥ್ವಿ ಗಾರ್ಡನ್ ಈ ಹೆಸರು ಧಾರವಾಡಿಗರಿಗೆ ಚಿರಪರಿಚಿತ. ಕೇವಲ ಹೆಸರನ್ನಷ್ಟೇ ಗುರುತು ಮಾಡಿಕೊಂಡರೆ ಸಾಲದು ಒಮ್ಮೆ ಈ ಹೋಟೆಲ್‌ಗೆ ಭೇಟಿ ಕೊಟ್ಟು ಹೋಟೆಲ್‌ನಲ್ಲಿ ಮಾಡಲಾಗುವ ವೈವಿಧ್ಯಮಯ ಖಾದ್ಯಗಳನ್ನೂ ಸವಿದು ನೋಡಬೇಕು.
ಧಾರವಾಡದ ಕಲಘಟಗಿ ರಸ್ತೆಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಬಳಿ ಇರುವುದೇ ಈ ಪೃಥ್ವಿ ಗಾರ್ಡನ್. ದಶಕಗಳಿಂದ ಉತ್ತರ ಭಾರತ, ದಕ್ಷಿಣ ಭಾರತ ಹಾಗೂ ಕರಾವಳಿ ಭಾಗದ ವೈವಿಧ್ಯಮಯ ಖಾದ್ಯಗಳನ್ನು ಹುಬ್ಬಳ್ಳಿ, ಧಾರವಾಡ ಭಾಗದ ಜನರಿಗೆ ಉಣಬಡಿಸಲಾಗುತ್ತಿದೆ.
ಕೋರಿ ರೊಟ್ಟಿ, ಜವಾರಿ ಚಿಕನ್, ಬಾಯಲ್ಲಿ ನೀರು ತರಿಸುವ ನೀರ್ ದೋಸೆ, ಧಮ್ ಬಿರಿಯಾನಿ, ಘಮ ಘಮಿಸುವ ಮಟ್ಕಿ ಬಿರಿಯಾನಿ ಇಲ್ಲಿನ ವಿಶೇಷ ಖಾದ್ಯ. ಪ್ರತಿದಿನವೂ ಒಂದಿಲ್ಲೊಂದು ವಿಶೇಷ ಖಾದ್ಯಗಳನ್ನು ಈ ಹೋಟೆಲ್ ನೀಡುತ್ತಿದೆ. ನುರಿತ ಬಾನಸಿಗರಿಂದ ಶುಚಿ, ರುಚಿಯಾದ ಭಕ್ಷ್ಯ, ಭೋಜನಗಳನ್ನು ಕುಟುಂಬ ಸಮೇತ ಇಲ್ಲಿಗೆ ಬಂದು ಸವಿಯಬಹುದು. ಕುಟುಂಬದ ಸದಸ್ಯರಿಗೆ ಪ್ರತ್ಯೇಕ ರೂಮ್‌ಗಳು, ಚಿಕ್ಕಮಕ್ಕಳಿಗೆ ಪ್ಲೇ ಗಾರ್ಡನ್, ಬಿದಿರಿನ ಗುಡಿಸಲುಗಳ ಸೌಲಭ್ಯ ಇಲ್ಲಿದೆ.
ಬರ್ತಡೇ ಪಾರ್ಟಿಗಾಗಿ ದೊಡ್ಡ ಹಾಲ್ ವ್ಯವಸ್ಥೆ ಕೂಡ ಇಲ್ಲಿದ್ದು, ಪಾರ್ಕಿಂಗ್‌ಗಾಗಿ ವಿಶಾಲವಾದ ಜಾಗದ ವ್ಯವಸ್ಥೆ ಕೂಡ ಇದೆ. ಭಾನುವಾರ ಕೋರಿ ರೊಟ್ಟಿ, ಜವಾರಿ ಚಿಕನ್ ನೀರ್ ದೋಸೆ, ಸೋಮವಾರ ಫಿಶ್‌ಕರಿ, ಬಾಯಿಲ್ಡ್ ರೈಸ್, ಧಮ್ ಬಿರಿಯಾನಿ, ಮಂಗಳವಾರ ಧಮ್ ಬಿರಿಯಾನಿ, ಬುಧವಾರ ಹಾಗೂ ಗುರುವಾರ ನೀರ್ ದೋಸೆ, ಜವಾರಿ ಚಿಕನ್, ಶುಕ್ರವಾರ ಹಾಗೂ ಶನಿವಾರ ಇಡ್ಲಿ, ಚಿಕನ್ ಸುಕ್ಕಾ ಖಾದ್ಯ ನೀಡಲಾಗುತ್ತದೆ. ಪ್ರತಿದಿನ ಮಟ್ಕಿ ಚಿಕನ್, ಧಮ್ ಬಿರಿಯಾನಿ, ಡೆಸಲ್ಟ್‌ಗೇನೂ ಕೊರತೆ ಇರೋದಿಲ್ಲ. ಅನುಕೂಲಕ್ಕೆ ತಕ್ಕಂತೆ ಸರ್ವಿಸ್ ನೀಡಲಾಗುತ್ತದೆ. ಲಾಡ್ಜಿಂಗ್ ವ್ಯವಸ್ಥೆ ಕೂಡ ಇಲ್ಲಿದ್ದು, ಆನ್‌ಲೈನ್ ಬುಕ್ಕಿಂಗ್ ಕೂಡ ಮಾಡಿಕೊಳ್ಳಲಾಗುತ್ತದೆ. ಎಸಿ ಹಾಗೂ ನಾನ್ ಎಸಿ ರೂಮ್‌ಗಳು ಸಹ ಇಲ್ಲಿ ಲಭ್ಯ. ಇಂಡೋರ್ ಹಾಗೂ ಔಟ್‌ಡೋರ್ ಪಾರ್ಟಿ ಆರ್ಡರ್‌ಗಳನ್ನು ಸಹ ಇಲ್ಲಿ ತೆಗೆದುಕೊಳ್ಳಲಾಗುತ್ತಿದ್ದು, ಫ್ರೀ ಹೋಮ್ ಡೆಲೆವರಿ ಸೌಲಭ್ಯ ಕೂಡ ಇದೆ. ಹಾಗಾದ್ರೆ ತಡ ಯಾಕೆ ಈಗಲೇ ನಿಮ್ಮ ಕುಟುಂಬ ಸಮೇತ ಪೃಥ್ವಿ ಗಾರ್ಡನ್‌ಗೆ ಭೇಟಿ ಕೊಡಿ
ವಿಳಾಸ: ಪೃಥ್ವಿ ಗಾರ್ಡನ್, ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಹತ್ತಿರ, ಕಲಘಟಗಿ ರಸ್ತೆ, ಧಾರವಾಡ
ದೂರವಾಣಿ-0836-2465399
ಮೊಬೈಲ್-9343434977 ಹಾಗೂ 8105829624
Kshetra Samachara
01/08/2021 09:58 am