ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಾಣಿಜ್ಯ ನಗರಿಯ 'ಐಟಿ ಪಾರ್ಕ್‌' ಖಾಲಿ ಖಾಲಿ..!

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಬೆಳವಣಿಗೆ ಉತ್ತೇಜನ ಉದ್ದೇಶದೊಂದಿಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್‌ ಕಟ್ಟಡ ಎತ್ತಿ ಅನೇಕ ವರ್ಷಗಳವೇ ಕಳೆದಿವೆ. ಆದರೆ ಕೊರೊನಾ ಹಾಗೂ ಇನ್ನಿತರ ಕಾರಣದಿಂದಾಗಿ ಇದ್ದ ಒಂದಿಷ್ಟು ಕಂಪೆನಿ, ಸಂಸ್ಥೆಗಳು ಹೊರಹೋಗಿದ್ದು, ಶೇ.50 ಖಾಲಿ ಉಳಿಯುವಂತಾಗಿದೆ.

ಐಟಿ ಪಾರ್ಕ್‌ ಕಟ್ಟಡ ಸೌಲಭ್ಯಗಳ ಕೊರತೆಯಿಂದ ನರಳುತ್ತಿದೆ. ಸುಮಾರು 3.2 ಎಕರೆ ಜಾಗದಲ್ಲಿ 2.65 ಲಕ್ಷ ಚದರ ಅಡಿಯಲ್ಲಿ ಬಹುಮಹಡಿ ಭವ್ಯ ಕಟ್ಟಡದಲ್ಲಿ ಐಟಿ ಕಂಪೆನಿಗಳು ನಿರೀಕ್ಷಿತ ರೀತಿಯಲ್ಲಿ ಆರಂಭವಾಗದ ಹಿನ್ನೆಲೆಯಲ್ಲಿ ಐಟಿ ಪಾರ್ಕ್‌ ನಿರ್ವಹಣೆಯೂ ಸಾಧ್ಯವಾಗಲಿಲ್ಲ. ಹೀಗಾಗಿ ಐಟಿ ಹೊರತಾದ ಕಾರ್ಯಗಳಿಗೆ ಕಟ್ಟಡ ನೀಡಲಾಯಿತು. ಈಗ ಸೌಲಭ್ಯಗಳ ಕೊರತೆಯಿಂದಾಗಿ ಕಟ್ಟಡವು ಅರ್ಧದಷ್ಟು ಖಾಲಿಯಾಗಿ ಉಳಿದಿದೆ.

ಈ ಬಗ್ಗೆ ಸ್ಥಳೀಯ ನಾಯಕರು ಹಾಗೂ ಸಚಿವರು ಗಮನಹಿರಿಸಬೇಕಿದೆ. ಐಟಿ ಪಾರ್ಕ್‌ಗೆ ಹೆಚ್ಚು ಹೆಚ್ಚು ಮಾಹಿತಿ ತಂತ್ರಜ್ಞಾನ ಉದ್ಯಮ ಕಂಪನಿಗಳು ಬರುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

03/01/2021 03:51 pm

Cinque Terre

52.77 K

Cinque Terre

8

ಸಂಬಂಧಿತ ಸುದ್ದಿ