ಕಲಘಟಗಿ:ತಾಲೂಕಿನ ದುಮ್ಮವಾಡದ ಬ್ಯಾಂಕ್ ಆಫ್ ಬರೋಡಾದಲ್ಲಿ ಜನಸಂದಣಿ ಹೆಚ್ಚಾಗಿದ್ದು ಜನರು ಬ್ಯಾಂಕ್ ಸೇವೆ ಪಡೆಯಲು ಕರೋನಾ ಸಮಯದಲ್ಲಿ ಪರದಾಡುವಂತಾಗಿದೆ.ಗ್ರಾಮದಲ್ಲಿನ ಬ್ಯಾಂಕ್ ಆಫ್ ಬರೋಡಾ ಜೊತೆ ವಿಜಯ ಬ್ಯಾಂಕ್ ವಿಲೀನವಾಗಿದ್ದು,ಇಲ್ಲಿ ವ್ಯವಹಾರಕ್ಕೆ ಬರುವ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಗಂಟೆಗಟ್ಟಲೇ ಕಾಯ ಬೇಕಿದೆ.ವಿಜಯ ಬ್ಯಾಂಕ್ ಗ್ರಾಹಕರು ತಮ್ಮ ಹಳೆಯ ಖಾತೆ ಹಾಗೂ ಎಟಿಎಂ ಹೊಸದಾಗಿ ಮಾಡಿಸಲು ಸಮಸ್ಯೆ ಅನುಭವಿಸ ಬೇಕಾಗಿದೆ.ಕೆಲವು ಸಲ ಸರ್ವರ್ ಸಮಸ್ಯೆಯಿಂದ ಗ್ರಾಹಕರು ಬಂದ ಕೆಲಸವೂ ಆಗದೆ ಮರಳುವಂತಾಗಿದೆ.
Kshetra Samachara
12/10/2020 12:41 pm