ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಮ್ಮನನ್ನು ನೆನಪಿಸುವ 'ಅಪ್ಪಟ ಕರ್ನಾಟಕ'- ಹಬ್ಬದ ಖರೀದಿಗೆ ಸಿದ್ಧರಾಗಿ

ಹುಬ್ಬಳ್ಳಿ: 'ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ' ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಗಣ್ಯರು, ಸಂಸ್ಥೆಗಳು ಗ್ರಾಮಗಳ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿಕೊಂಡಿವೆ. ದೇಶಪಾಂಡೆ ಫೌಂಡೇಶನ್ ಸಂಸ್ಥೆ ಕೂಡ ಇದರಿಂದ ಹೊರತಾಗಿಲ್ಲ.

ದೇಶಪಾಂಡೆ ಫೌಂಡೇಶನ್ ಸಂಸ್ಥೆಯು ನಬಾರ್ಡ್ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ನೂರಾರು ಮಹಿಳೆಯರಿಗೆ ತರಬೇತಿ ನೀಡಿ, ಬದುಕಿಗೆ ಆಸರೆಯಾಗಿದೆ. ಇದರೊಂದಿಗೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ 'ಅಪ್ಪಟ ಕರ್ನಾಟಕ' ಮಳಿಗೆ ತೆರೆಯುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಹೆಸರೇ ಹೇಳುವಂತೆ ಇದೊಂದು ಅಪ್ಪಟ ಕರ್ನಾಟಕದ ಆಹಾರ, ಬಟ್ಟೆ ಹಾಗೂ ಕರ ಕುಶಲ ವಸ್ತುಗಳು ಸಿಗುವ ಮಳಿಗೆಯಾಗಿದೆ.

ನಮ್ಮ ತಾಯಂದಿರು ಮಾಡುವ ಕರಕುಶಲ ವಸ್ತುಗಳು, ಆಹಾರ ಪದಾರ್ಥ, ಕಸೂತಿ ಕೆಲಸವನ್ನು 'ಅಪ್ಪಟ ಕರ್ನಾಟಕ' ನೆನಪಿಸುತ್ತದೆ. ಇಲ್ಲಿ ಸಿಗುವ ಪ್ರತಿ ವಸ್ತು, ಪದಾರ್ಥವನ್ನು ಅಮ್ಮ ಈಗತಾನೆ ಮಾಡಿ ಇಟ್ಟಂತೆ ಫೀಲ್ ಆಗುತ್ತದೆ.

ವಿಳಾಸ ಹೀಗಿದೆ: ಪ್ಲಾಟ್ ನಂ: 12 ಸೆಕೆಂಡ್ ಸ್ಟೇಜ್, ಶಿರೂರ್ ಪಾರ್ಕ್‌, ರವಿ ಸೂಪರ್ ಮಾರ್ಕೆಟ್ ಎದುರಿಗೆ ವಿದ್ಯಾನಗರ, ಹುಬ್ಬಳ್ಳಿ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836 3560076 ಗೆ ಕರೆ ಮಾಡಿ.

Edited By : Nagesh Gaonkar
Kshetra Samachara

Kshetra Samachara

02/11/2021 04:48 pm

Cinque Terre

92.26 K

Cinque Terre

1

ಸಂಬಂಧಿತ ಸುದ್ದಿ