ಹುಬ್ಬಳ್ಳಿ: ಶಿಕ್ಷಣ ಮುಗಿದ ಕೂಡಲೇ ಎಲ್ಲರಿಗೂ ನೌಕರಿ ಬೇಕು. ನೌಕರಿ ಸಿಗದಿದ್ದರೆ ಅವರ ಪರಿಸ್ಥಿತಿ ದೇವರಿಗೇ ಪ್ರೀತಿ. ಆದರೂ ಇಲ್ಲಿ ಯಾವುದೂ ಸರಿ ಇಲ್ಲ ಎಂದು ದೂರುವವರೆ ಹೆಚ್ಚು. ಅಂತವರ ನಡುವೆ ಕಾಡು ಕುಸುಮದಂತೆ ಇರುವ ಯುವ ಉದ್ಯಮಿ, ಅಲ್ಪಾವಧಿಯಲ್ಲೇ ಸುಮಾರು 17 ಜನರಿಗೆ ಕೆಲಸ ಕೊಡುವಷ್ಟು ಬೆಳೆದಿದ್ದಾರೆ. ಅವರ ಬಗ್ಗೆ ಒಂಚೂರು ಡೀಟೇಲ್ಸ್ ತಿಳಿಯೋಣ.
ಹೆಸರು ಶಿವಶಂಕರಯ್ಯ ಬೆಳ್ಳೇರಿಮಠ. ಹುಬ್ಬಳ್ಳಿ ಸಮೀಪದ ಕುಸುಗಲ್ ಗ್ರಾಮದ ಇವರು ಬಿ.ಕಾಂ ಪದವೀಧರ. ಓದು ಮುಗಿದ ನಂತರ ಯಾವುದೇ ನೌಕರಿಗಾಗಿ ಅಲೆಯದೇ ತಮ್ಮ ಮನೆಯಲ್ಲೇ ಸಣ್ಣದಾಗಿ ಶ್ರೀ ವೀರಭದ್ರೇಶ್ವರ ಗಾರ್ಮೆಂಟ್ಸ್ (SVG)ಎಂಬ ನವೋದ್ಯಮ ಆರಂಭಿಸಿದ್ದಾರೆ. ಇದಕ್ಕಾಗಿ ಶಿವಶಂಕರಯ್ಯ ಅವರಿಗೆ ತಂದೆ ಹಾಗೂ ಕುಟುಂಬಸ್ಥರ ಸಹಕಾರವೂ ದೊರೆತಿದೆ. ಆರಂಭದಲ್ಲಿ ಕೊಂಚ ನಷ್ಟ, ಇರಿಸು-ಮುರಿಸು, ಕಷ್ಟದ ಅಡೆತಡೆಗಳು ಇದೆಲ್ಲವನ್ನೂ ಎದುರಿಸಿ ಮುಂದೆ ನುಗ್ಗಿದ ಶಿವಶಂಕರ್ ಇಂದು ಹುಬ್ಬಳ್ಳಿ-ಧಾರವಾಡ ಸೇರಿ ಆಂಧ್ರ, ತಮಿಳುನಾಡು, ಗುಜರಾತ್ ಸೇರಿದಂತೆ ಹಲವಾರು ರಾಜ್ಯಗಳಿಗೂ ಸಿದ್ಧ ಉಡುಪುಗಳನ್ನು ಕಳಿಸುತ್ತಿದ್ದಾರೆ. ಇಂತಹ ಯಶಸ್ವಿ ಗಾರ್ಮೆಂಟ್ಸ್ ಉದ್ಯಮಿ ಶಿವಶಂಕರ್ ಬೆಳ್ಳೇರಿಮಠ ಅವರೊಂದಿಗೆ ನಮ್ಮ ಪ್ರತಿನಿಧಿ ನಾಗರಾಜ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/04/2022 10:27 pm