ಕುಂದಗೋಳ : ರೈತರು ಬೆಳೆದ ಫಸಲನ್ನು ಖರೀದಿ ಮಾಡಲು ನಿರ್ದಿಷ್ಟವಾಗಿ ಗೊತ್ತು ಪಡಿಸಿದ ಎಪಿಎಂಸಿ ಜಾಗವನ್ನೇ ಲೀಸ್ ಕಮ್ ಸೇಲ್ ಆಧಾರದ ಮೇಲೆ ವರ್ತಕರಿಗೆ ಖಾಯಂ ಬಿಟ್ಟು ಕೊಡಲು ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ತಯಾರಾಗಿದೆ.
ಕುಂದಗೋಳ ತಾಲೂಕಿನ ಸಮಸ್ತ ರೈತರ ಬೆಳೆದ ಫಸಲನ್ನು ಒಂದೇ ಸ್ಥಳದಲ್ಲಿ ರೈತರು ಮಾರಾಟ ಮಾಡಲು ಅನುಕೂಲ ಕಲ್ಪಿಸುವ ದೃಷ್ಟಿಕೋನದಿಂದ ಈ ನಿಯಮ ಜಾರಿಗೆ ಬರಲಿದೆ.
ಈಗಾಗಲೇ ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಲೈಸೆನ್ಸ್ ಹೊಂದಿರುವ ವರ್ತಕರಿಗೆ ಈ ಸೌಲಭ್ಯ ಸಿಗಲಿದೆ. ಸದ್ಯ 23 ನಿವೇಶನಗಳನ್ನು ಹಂಚಿಕೆ ಮಾಡಲು ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿ ಶಿಫಾರಸ್ಸು ಮಾಡಿದ್ದು ಪ್ರಕ್ರಿಯೆ ಆರಂಭವಾಗಿದೆ.
ಈಗಾಗಲೇ ಸಂಪೂರ್ಣ ಎಪಿಎಂಸಿ ಸ್ವಚ್ಚತಾ ಕಾರ್ಯ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ವರ್ತಕರೇ ಅವರವರ ಎಪಿಎಂಸಿ ಮಾರುಕಟ್ಟೆ ಸ್ಥಳವನ್ನು ನಿರ್ವಹಣೆ ಮಾಡಿಕೊಂಡು ರೈತರು ಬೆಳೆದ ಫಸಲನ್ನು ಖರೀದಿ ಮಾಡಬಹುದು.
ಈ ವ್ಯವಸ್ಥೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ವಹಣೆ ಜೊತೆ ಒಂದೇ ಸ್ಥಳದಲ್ಲಿ ವರ್ತಕರ ವ್ಯಾಪಾರ ವೃದ್ಧಿಯಾದರೇ ಎಪಿಎಂಸಿಯ ಲಾಭದ ಹಾದಿಯೂ ದ್ವಿಗುಣಗೊಳ್ಳಲಿದೆ.
ಈ ಹಿಂದೆ ವರ್ತಕರ ವ್ಯಾಪಾರ ವಹಿವಾಟಿನ ಅನುಸಾರ 2020 ಜನವರಿಯಲ್ಲಿ 31 ಲಕ್ಷ ಮಾರುಕಟ್ಟೆ ಶುಲ್ಕದಲ್ಲಿ ಲಾಭ ಗಳಿಸಿದ್ದ ಎಪಿಎಂಸಿ, ಈ 2021 ಜನವರಿಯಲ್ಲಿ ಕೊರೊನಾ ಮತ್ತು ಕೃಷಿ ಮಸೂದೆ ತಿದ್ದುಪಡಿ ಹಿಡಿತದಿಂದ ನಲುಗಿ ಕೇವಲ 27.000 ಸಾವಿರಕ್ಕೆ ಮಾತ್ರ ತೃಪ್ತಿ ಪಟ್ಟಿದೆ.
ಸದ್ಯ ಎಪಿಎಂಸಿ ಕೈಗೊಂಡಿರುವ ನಿರ್ಧಾರಕ್ಕೆ ವರ್ತಕರು ಎಸ್ ಎಂದಿದ್ದು, ಮುಂಬರುವ ದಿನಗಳಲ್ಲಿ ರೈತರಿಗೆ ಇದರ ಪ್ರಯೋಜನ ಯಾವ ? ರೀತಿಯಲ್ಲಿ ದೊರಕಲಿದೆ ಎಂಬುದನ್ನು ಕಾಯ್ದು ನೋಡಬೇಕು.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
02/02/2021 11:34 am