ನವಲಗುಂದ : ತಾಲೂಕಿನಲ್ಲಿ ನಿರಂತರ ಬಿಟ್ಟು ಬಿಡದೇ ಸುರಿದ ಬಾರಿ ಮಳೆಗೆ ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳದ ಉಕ್ಕಿ ರೈತರ ಜಮೀನುಗಳಿಗೆ ನೀರು ನುಗ್ಗಿ ಸಂಪೂರ್ಣ ಬೆಳೆಹಾನಿ ಆಗಿದ್ದು, ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಹಿನ್ನಲೆ ಪ್ರತಿ ಹೆಕ್ಟೇರ್ ಗೆ ಮೂವತ್ತು ಸಾವಿರ ಪರಿಹಾರ ನೀಡಲು ಕರ್ನಾಟಕ ರಾಜ್ಯ ಜಾತ್ಯತೀತ-ಪಕ್ಷತೀತ ಮಹದಾಯಿ ಕಳಸಾ ಬಂಡೂರಿ ರೈತ, ಅಸಂಘಟಿತ, ಮಹಿಳೆಯರ ರೈತ ಹೋರಾಟ ನವಲಗುಂದ ವತಿಯಿಂದ ಬುಧವಾರ ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಲಾಯಿತು.
ಬೆಣ್ಣೆ ಹಳ್ಳದ ಪಕ್ಕದಲ್ಲಿ ಇರುವ ಸುಮಾರು ಎಂಟು ಸಾವಿರದ ಐದು ನೂರು ಹೆಕ್ಟೇರ್ ಜಮೀನಿನಲ್ಲಿನ ಬೆಳೆ ಸಂಪೂರ್ಣ ಹಾಳಾಗಿದ್ದು, ಕಳೆದ ಆರೇಳು ವರ್ಷದಿಂದ ಈ ರೈತರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಪರಿಹಾರ ನೀಡಲು ಒತ್ತಾಯಿಸಿದರೂ ಕೂಡಾ ಇಲ್ಲಿಯವರೆಗೆ ಹೆಚ್ಚಿನ ಪರಿಹಾರ ನೀಡಿಲ್ಲ, ಈ ಕೂಡಲೇ ಹಾನಿಯಾದ ಪ್ರತಿ ಹೆಕ್ಟೇರ್ ಗೆ ಮೂವತ್ತು ಸಾವಿರ ಪರಿಹಾರ ನೀಡಬೇಕು, ಇದರೊಂದಿಗೆ ಮನೆ ಬಿದ್ದ ಸಂತ್ರಸ್ತರಿಗೆ ಐದು ಲಕ್ಷ ಪರಿಹಾರ ಧನ ನೀಡಬೇಕು ಎಂದು ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ, ಶಲವಡಿ ಎಂ, ಡಿ ಜಿ ಹೆಬಸೂರ, ವೀರಯಾ ಸೇರಿದಂತೆ ಹಲವರು ಇದ್ದರು.
Kshetra Samachara
28/07/2021 10:46 pm