ಹುಬ್ಬಳ್ಳಿ: ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಬಾರದ ಕಾರಣ ಹೃದಯಾಘಾತದಿಂದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಹುಬ್ಬಳ್ಳಿಯ ಸಾಯಿಬಾಬಾ ಮಂದಿರದ ಬಳಿ ಇಂದು ಮುಂಜಾನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಬಂಡವಾಡ ಗ್ರಾಮದ ಮಲ್ಲಪ್ಪ ರೆಡ್ಡೇರ್ 60, ಎಂಬಾತ ಹೃದಯಾಘಾತದಿಂದ ಸಾವನಪ್ಪಿರುವ ವ್ಯಕ್ತಿ. ಇಂದು ಮುಂಜಾನೆ ಸಂತೆಗೆ ಬಂದಿದ್ದ ಮಲ್ಲಪ್ಪ ಸಾಯಿಬಾಬ ಮಂದಿರದ ಬಳಿ ಕುಸಿದ ಬಿದ್ದಿದ್ದಾರೆ. ಇನ್ನು ಸ್ಥಳೀಯರು ಆತನನ್ನು ಕಿಮ್ಸ್‌ಗೆ ರವಾನಿಸಲು ಅಂಬುಲೇನ್ಸ್ ಗೆ ಕರೆ ಮಾಡಿದ್ರೂ ಸರಿಯಾದ ಸಮಯಕ್ಕೆ ಬಾರದ ಕಾರಣ ಆತನ ಜೀವ ಹಾರಿ ಹೋಗಿದೆ. ಇನ್ನು ಸ್ಥಳಕ್ಕೆ ದೌಡಾಯಿಸಿದ ಉಪನಗರ ಪೊಲೀಸ್ ಠಾಣೆ ಸಿಬ್ಬಂದಿ ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
Kshetra Samachara
06/09/2022 03:57 pm