ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಗುಚಿ ಬಿದ್ದ ತ್ರಿಚಕ್ರ ವಾಹನ; ಚಾಲಕ ಬಚಾವ್‌

ಕುಂದಗೋಳ : ಪಶುಪತಿಹಾಳ ಗ್ರಾಮದಿಂದ ಸಿಲಿಂಡರ್ ತುಂಬಿಕೊಂಡು ಹೊರಟಿದ್ದ ವಾಹನವೊಂದು ರಸ್ತೆ ಅವ್ಯವಸ್ಥೆಗೆ ಸಿಲುಕಿ ಮಗುಚಿ ಬಿದ್ದ ಘಟನೆ ಪಶುಪತಿಹಾಳ ಗುಡಗೇರಿ ರಸ್ತೆ ಮಾರ್ಗ ಮಧ್ಯೆ ನಡೆದಿದೆ.

ಕಳೆದ ಹಲವಾರು ವರ್ಷಗಳಿಂದ ಹಾಳಾದ ಪಶುಪತಿಹಾಳ ಗುಡಗೇರಿ ರಸ್ತೆ ಮಳೆಯಿಂದಾಗಿ ರಾಡಿ ಕಲುಷಿತ ನೀರು ತುಂಬಿ ಜಲಾವೃತವಾಗಿದ್ದು, ಗುರುವಾರ ಮುಂಜಾನೆ ಸಿಲಿಂಡರ್ ಸಾಗಿಸುತ್ತಿದ್ದ ತ್ರಿಚಕ್ರ ವಾಹನದ ಚಕ್ರ ಬೇರ್ಪಟ್ಟು ರಸ್ತೆಯಲ್ಲಿ ವಾಹನ ಬಿದ್ದಿದ್ದು ಅದೃಷ್ಟವಶಾತ್ ಅಪಾಯವೊಂದು ತಪ್ಪಿದಂತಾಗಿದೆ.

ಇನ್ನೂ ವಾಹನ ಉರುಳಿದ ರಭಸಕ್ಕೆ ಚಾಲಕ ರಾಡಿ ಕಲುಷಿತ ನೀರಿನಲ್ಲೇ ಬಿದ್ದಿದ್ದು ತಕ್ಷಣ ಸ್ಥಳೀಯರು ಸಹಾಯ ಮಾಡಿ ವಾಹನ ಹಾಗೂ ಚಾಲಕನನ್ನು ಅಪಾಯದಿಂದ ಪಾರು ಮಾಡಿದ್ದಾರೆ.

Edited By : Abhishek Kamoji
Kshetra Samachara

Kshetra Samachara

26/08/2022 03:56 pm

Cinque Terre

25.64 K

Cinque Terre

3

ಸಂಬಂಧಿತ ಸುದ್ದಿ