ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಿದ್ಯುತ್ ತಂತಿ ಮೇಲೆ ವಾಲಿದ ಕಲ್ಪವೃಕ್ಷ; ತಪ್ಪಿದ ಅನಾಹುತ

ಕುಂದಗೋಳ : ವಿಪರೀತ ಮಳೆ ಗಾಳಿ ಹೊಡೆತಕ್ಕೆ ಕಲ್ಪವೃಕ್ಷವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದ ಘಟನೆ ಕುಂದಗೋಳ ಮತಕ್ಷೇತ್ರದ ಅದರಗುಂಚಿ ಗ್ರಾಮದ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಬಳಿ ನಡೆದಿದೆ.

ಇಂದು ಮಧ್ಯಾಹ್ನದ ವೇಳೆ ಬಿರುಗಾಳಿ ರಭಸಕ್ಕೆ ತೆಂಗಿನಮರ ವಿದ್ಯುತ್ ತಂತಿ ಮೇಲೆ ವಾಲಿದೆ. ತಕ್ಷಣ ಗಮನಿಸಿದ ಸ್ಥಳೀಯರು ಹೆಸ್ಕಾಂ'ಗೆ ಮಾಹಿತಿ ನೀಡಿದ್ದು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ವಿದ್ಯುತ್ ತಂತಿ ಮೇಲೆ ವಾಲಿರುವ ಮರ ಹೆದ್ದಾರಿ ಮೇಲೆ ಬೀಳುವ ಹಂತದಲ್ಲಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ಮರ ತೆರವು ಕ್ರಮಕ್ಕೆ ಮುಂದಾಗಿದ್ದಾರೆ.

Edited By : Shivu K
Kshetra Samachara

Kshetra Samachara

10/08/2022 05:10 pm

Cinque Terre

32.52 K

Cinque Terre

0

ಸಂಬಂಧಿತ ಸುದ್ದಿ